×
Ad

ಕೋವಿಡ್19 ರೂಪಾಂತರಿ ಪ್ರಭೇದಗಳ ವಿರುದ್ಧವೂ ಫೈಝರ್, ಮೋಡರ್ನಾ ಲಸಿಕೆ ಸಮರ್ಥ

Update: 2021-05-18 23:57 IST

ವಾಶಿಂಗ್ಟನ್, ಮೇ 18: ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಎರಡು ರೂಪಾಂತರಿ ಕೊರೋನ ವೈರಸ್ ಪ್ರಭೇದಗಳ ವಿರುದ್ಧ ಫೈಝರ್ ಮತ್ತು ಮೋಡರ್ನಾ ಲಸಿಕೆಗಳು ಅತ್ಯಂತ ಪರಿಣಾಮಕಾರಿಯಾಗಿರುತ್ತವೆ ಎನ್ನುವುದು ಅಮೆರಿಕದ ವಿಜ್ಞಾನಿಗಳು ನಡೆಸಿರುವ ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.

ಈ ಸಂಶೋಧನೆಯನ್ನು ಎನ್‌ವೈಯು ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಎನ್‌ವೈಯು ಲ್ಯಾಂಗೋನ್ ಸೆಂಟರ್ ನಡೆಸಿವೆ. ಆದರೆ ಈ ಸಂಶೋಧನೆಯು ಪ್ರಾಥಮಿಕವಾಗಿದ್ದು, ಯಾವುದೇ ಪತ್ರಿಕೆಯಲ್ಲಿ ಪ್ರಕಟಗೊಂಡಿಲ್ಲ.

ಈ ವೈರಸ್ ಪ್ರಭೇದಗಳ ವಿರುದ್ಧ ಈ ಲಸಿಕೆಗಳು ಉತ್ಪಾದಿಸುವ ಪ್ರತಿಕಾಯಗಳು ಕೊಂಚ ದುರ್ಬಲವೆನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ, ಲಸಿಕೆಗಳ ರಕ್ಷಣಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವಷ್ಟು ದುರ್ಬಲ ಅಲ್ಲ ಎಂದು ವರದಿಯ ಹಿರಿಯ ಲೇಖಕ ನತಾನಿಯಲ್ ನೆಡ್ ಲ್ಯಾಂಡೋ ಸೋಮವಾರ ಎಎಫ್‌ಪಿಯೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News