ಪಾಕ್ ಮಾಜಿ ವೇಗದ ಬೌಲರ್ ಆಮಿರ್ ಎದುರಿಸಿದ್ದ‘ಅತ್ಯಂತ ಕಠಿಣ’ ಬ್ಯಾಟ್ಸ್ ಮನ್ ಯಾರು ಗೊತ್ತೇ?

Update: 2021-05-21 14:25 GMT
photo: facebook 

ಕರಾಚಿ: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮುಹಮ್ಮದ್ ಆಮಿರ್ ಅವರು ಭಾರತದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ತನ್ನ  ಪೈಪೋಟಿಯನ್ನು ತೆರೆದಿಟ್ಟರು ಹಾಗೂ  ಅವರು ಬೌಲಿಂಗ್ ಮಾಡಿದ್ದ  "ಅತ್ಯಂತ ಕಠಿಣ" ಬ್ಯಾಟ್ಸ್‌ಮನ್‌ ನನ್ನು ಆಯ್ಕೆ ಮಾಡಿದರು.

ಕ್ರಿಕ್ವಿಕ್‌ನ ಯೂಟ್ಯೂಬ್ ಚಾನೆಲ್‌ನೊಂದಿಗೆ  ಮಾತನಾಡಿದ ಆಮಿರ್,  ಕೊಹ್ಲಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ  ಒತ್ತಡದ ಸಂದರ್ಭಗಳಲ್ಲಿ ಖುಷಿಪಡುವ ಅವರ ಸಾಮರ್ಥ್ಯವನ್ನು ಶ್ಲಾಘಿಸಿದರು. ಕೊಹ್ಲಿ ವಿರುದ್ಧ ಬೌಲಿಂಗ್‌ಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡುವುದು ಸುಲಭ ಎಂದು  ಕಂಡುಕೊಂಡಿದ್ದಾಗಿ ಅವರು ತಿಳಿಸಿದರು.

ಆದಾಗ್ಯೂ, ತಾನು ಬೌಲಿಂಗ್ ಮಾಡಿದ್ದ  ಅತ್ಯಂತ ಕಷ್ಟಕರವಾದ ಬ್ಯಾಟ್ಸ್‌ಮನ್ ನನ್ನು ಹೆಸರಿಸುವಾಗ, ಆಮಿರ್ ಆಸ್ಟ್ರೇಲಿಯದ ಸ್ಟಾರ್ ಕ್ರಿಕೆಟಿಗ ಸ್ಟೀವ್ ಸ್ಮಿತ್‌ರನ್ನು ಆಯ್ಕೆ ಮಾಡಿದರು.

"ಸ್ಟೀವ್ ಸ್ಮಿತ್ ಈ ಯುಗದಲ್ಲಿ ಬೌಲಿಂಗ್ ಮಾಡಲು ಅತ್ಯಂತ ಕಷ್ಟಕರವಾದ ಬ್ಯಾಟ್ಸ್‌ಮನ್ ಆಗಿದ್ದಾರೆ. ಏಕೆಂದರೆ ಅವರ ತಂತ್ರವು ತುಂಬಾ ವಿಭಿನ್ನವಾಗಿದೆ. ಅವರ ನಿಲುವು ಅವರ ವಿರುದ್ಧ ಬೌಲಿಂಗ್ ಮಾಡುವುದನ್ನು  ಕಷ್ಟಕರವಾಗಿಸುತ್ತದೆ. ಚೆಂಡನ್ನು ಸ್ಟಂಪ್‌ನಿಂದ ಹೊರಗೆ ಬಿಡುವುದರಲ್ಲಿ ಅವರು ನಿಸ್ಸೀಮರು" ಎಂದು ಆಮಿರ್ ಹೇಳಿದರು.

29 ವರ್ಷದ ವೇಗಿ ಕೊಹ್ಲಿಯನ್ನು ಹೊಗಳಿದ ಆಮಿರ್, "ಕೊಹ್ಲಿ ಅವರನ್ನು ‘ಕಿಂಗ್ ಕೊಹ್ಲಿ’ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಎಲ್ಲಾ ಮಾದರಿ ಕ್ರಿಕೆಟ್  ನಲ್ಲಿ ಸಾಬೀತುಪಡಿಸಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಅವರು ಖುಷಿಪಡುತ್ತಾರೆ, ಹಾಗೂ  ನಾನು ಅವರಿಗೆ ಬೌಲಿಂಗ್ ಮಾಡಲು ಇಷ್ಟಪಡುತ್ತೇನೆ" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News