ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳು ಯುಎಇಗೆ ಸ್ಥಳಾಂತರ: ಬಿಸಿಸಿಐ

Update: 2021-05-29 08:27 GMT

ಹೊಸದಿಲ್ಲಿ: ಕೆಲವು ಆಟಗಾರರಿಗೆ ಕೊರೋನ ವೈರಸ್ ಸೋಂಕು ತಗಲಿದ್ದರಿಂದ  ಮುಂದೂಡಲ್ಪಟ್ಟಿದ್ದ 14ನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಉಳಿದ ಪಂದ್ಯಗಳನ್ನು ಪೂರ್ಣಗೊಳಿಸಲು  ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಸುದ್ದಿಯನ್ನು  ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ANI ಗೆ ಶನಿವಾರ ದೃಢಪಡಿಸಿದರು.

ವರ್ಚುವಲ್ ಆಗಿ ನಡೆದ ಬಿಸಿಸಿಐ ವಿಶೇಷ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ವರ್ಷದ ಐಪಿಎಲ್ ಅನ್ನು ಯುಎಇಯಲ್ಲಿ ಮುಂದುವರಿಸಲು ಸದಸ್ಯರು ಒಮ್ಮತದಿಂದ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವರ್ಷದ ಐಪಿಎಲ್ ಮೊಟಕುಗೊಳ್ಳುವ ಮೊದಲು ಪ್ಲೇ ಆಫ್ ಸಹಿತ 31 ಪಂದ್ಯಗಳು ಆಡಲು ಬಾಕಿ ಇತ್ತು.  ಸೆಪ್ಟಂಬರ್ 18-19ರಂದು ಟೂರ್ನಿ ಆರಂಭವಾಗಿ,  ಅಕ್ಟೋಬರ್ 9/10ರಂದು ಫೈನಲ್ ಪಂದ್ಯ ನಡೆಯುವ ಸಾಧ್ಯತೆಯಿದೆ.

ಕಳೆದ ವರ್ಷ ಕೂಡ ಕೋವಿಡ್-19ನಿಂದಾಗಿ  ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು.  ಕಳೆದ ವರ್ಷ ಸೆಪ್ಟಂಬರ್ 19ರಿಂದ ನ.10ರ ತನಕ ಟೂರ್ನಿ ನಡೆಸಲಾಗಿತ್ತು. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News