×
Ad

ಚಾಂಪಿಯನ್ಸ್ ಲೀಗ್: ಮ್ಯಾಂಚೆಸ್ಟರ್ ಸಿಟಿ ತಂಡವನ್ನು ಮಣಿಸಿದ ಚೆಲ್ಸಿ ಚಾಂಪಿಯನ್

Update: 2021-05-30 10:54 IST
photo: (AP)

ಪೊರ್ಟೊ:  ಕೈ ಹ್ಯಾವರ್ಟ್ಜ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ  ಮ್ಯಾಂಚೆಸ್ಟರ್ ಸಿಟಿಯ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿದ ಚೆಲ್ಸಿ ಫುಟ್ಬಾಲ್ ತಂಡ ಎರಡನೇ ಬಾರಿಗೆ ಚಾಂಪಿಯನ್ಸ್ ಲೀಗ್  ಟ್ರೋಫಿಯನ್ನು  ಗೆದ್ದುಕೊಂಡಿತು,

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿಯ ಮೂರನೇ ಬಾರಿ ಟ್ರೋಫಿಯನ್ನು ಎತ್ತುವ ಕನಸು ನುಚ್ಚುನೂರಾಯಿತು.

ಮೊದಲಾರ್ಧ ಕೊನೆಗೊಳ್ಳಲು ಮೂರು ನಿಮಿಷಗಳ ಮೊದಲು 42ನೇ ನಿಮಿಷದಲ್ಲಿ ಗೋಲು ಗಳಿಸಿದ ಹ್ಯಾವರ್ಟ್ಜ್ ಚೆಲ್ಸಿಗೆ 1-0 ಮುನ್ನಡೆ ಒದಗಿಸಿದರು. ಕೊನೆಯ ತನಕ  ಇದೇ ಮುನ್ನಡೆಯನ್ನು ಉಳಿಸಿಕೊಂಡ ಚೆಲ್ಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೈನಲ್ ಪಂದ್ಯವನ್ನು ಕೇವಲ 14,000 ಫುಟ್ಬಾಲ್ ಅಭಿಮಾನಿಗಳು ವೀಕ್ಷಿಸಿದರು.

"ಇದು ನಂಬಲಾಗದಷ್ಟು ಕಠಿಣ ಹೋರಾಟವಾಗಿತ್ತು. ನಮ್ಮ ಪ್ರಯತ್ನ ದೊಡ್ಡದ್ದಾಗಿತ್ತು. ನಾವು ಕೆಲವು ಕಷ್ಟದ ಕ್ಷಣಗಳನ್ನು ಜಯಿಸಿದ್ದೇವೆ'' ಎಂದು ಚೆಲ್ಸಿ ಕೋಚ್ ಥಾಮಸ್ ಟುಚೆಲ್ ಬಿಟಿ ಸ್ಪೋಟ್ಸ್ ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News