ಹೆಚ್ಚುತ್ತಿರುವ ಕೊರೋನ ಸಾವು: ಬ್ರೆಝಿಲ್‌ನಲ್ಲಿ ಬೃಹತ್ ಪ್ರತಿಭಟನೆ

Update: 2021-06-03 17:33 GMT

ರಿಯೋ ಡಿ ಜನೈರೊ (ಬ್ರೆಝಿಲ್), ಜೂ. 3: ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ವಿಧಾನವನ್ನು ವಿರೋಧಿಸಿ ದೇಶದ ಹಲವಾರು ನಗರಗಳಲ್ಲಿ ಬುಧವಾರ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸಿದರು.

ಬ್ರೆಝಿಲ್‌ನಲ್ಲಿ ಈವರೆಗೆ ಸುಮಾರು 5 ಲಕ್ಷ ಮಂದಿ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ.

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನ ವೈರಸ್ ಸಾವಿನ ಹಿನ್ನೆಲೆಯಲ್ಲಿ ಮಾಜಿ ಸೇನಾ ಮುಖ್ಯಸ್ಥನಾಗಿರುವ ಬಲಪಂಥೀಯ ನಾಯಕ ಬೊಲ್ಸೊನಾರೊ ಜನಪ್ರಿಯತೆ ಕುಗ್ಗುತ್ತಿದೆ.

ಬುಧವಾರವೊಂದೇ ದಿನ ಸುಮಾರು ಒಂದು ಲಕ್ಷ ಬ್ರೆಝಿಲಿಯನ್ನರು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ ಹಾಗೂ 2,507 ಮಂದಿ ಮೃತಪಟ್ಟಿದ್ದಾರೆ.

ಶನಿವಾರವೂ ದೇಶಾದ್ಯಂತದ ಕನಿಷ್ಠ 16 ನಗರಗಳಲ್ಲಿ ಸಾವಿರಾರು ಜನರು ರಸ್ತೆಗಿಳಿದು ಬೊಲ್ಸೊನಾರೊ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರು. ಎಡಪಂಥೀಯ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಗಳು ಪ್ರತಿಭಟನೆಗಳನ್ನು ಆಯೋಜಿಸಿದ್ದವು.

ಬ್ರೆಝಿಲ್‌ನ ಅತಿ ದೊಡ್ಡ ನಗರ ಸಾವೊ ಪೌಲೊದಲ್ಲಿ ಸಾವಿರಾರು ಮುಖಗವಸುಧಾರಿ ಜನರು ರಸ್ತೆಗಿಳಿದು ಪ್ರತಿಭಟಿಸಿದರು. ಬೊಲ್ಸೊನಾರೊರನ್ನು ರಕ್ತಪಿಶಾಚಿಯಂತೆ ಬಿಂಬಿಸುವ ದೊಡ್ಡ ಬಲೂನೊಂದನ್ನು ಪ್ರತಿಭಟನಕಾರರು ಆಕಾಶಕ್ಕೆ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News