ಅಮೆರಿಕದಿಂದ ‘ಕೋವ್ಯಾಕ್ಸ್’ಗೆ 2 ಬಿಲಿಯ ಡಾಲರ್ ದೇಣಿಗೆ

Update: 2021-06-05 16:02 GMT

ವಾಶಿಂಗ್ಟನ್, ಜೂ. 5: ಜಗತ್ತಿನಾದ್ಯಂತ ಕೋವಿಡ್-19 ಲಸಿಕೆಗಳ ಸಮಾನ ಪೂರೈಕೆಯನ್ನು ಖಾತರಿಪಡಿಸಲಿಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿರುವ ‘ಕೋವ್ಯಾಕ್ಸ್’ ಕಾರ್ಯಕ್ರಮಕ್ಕೆ ಅಮೆರಿಕ ಈವರೆಗೆ 2 ಬಿಲಿಯ ಡಾಲರ್ (ಸುಮಾರು 14,630 ಕೋಟಿ ರೂಪಾಯಿ) ದೇಣಿಗೆ ನೀಡಿದೆ.

ಶುಕ್ರವಾರ ಅಮೆರಿಕದ ವಿದೇಶಾಂಗ ಇಲಾಖೆಯ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುಎಸ್ಏಡ್ ಕೋವಿಡ್-19 ಟಾಸ್ಕ್ ಫೋರ್ಸ್ನ ಕಾರ್ಯಕಾರಿ ನಿರ್ದೇಶಕ ಜೆರೆಮಿ ಕೋನಿಂಡಿಕ್ ಈ ಮಾಹಿತಿಯನ್ನು ನೀಡಿದ್ದಾರೆ.

ಕೋವ್ಯಾಕ್ಸ್ಗೆ ಒಟ್ಟು 4 ಬಿಲಿಯ ಡಾಲರ್ ದೇಣಿಗೆ ನೀಡುವುದಾಗಿ ಅಮೆರಿಕ ಭರವಸೆ ನೀಡಿದೆ. ಆ ಪೈಕಿ ಈವರೆಗೆ 2 ಬಿಲಿಯ ಡಾಲರ್ ನೀಡಲಾಗಿದೆ. ಈ ಮಟ್ಟದ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರತಿಯೊಂದು ದೇಶದ ಬಳಿ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳು ಇಲ್ಲದೆ ಇರುವುದರಿಂದ, ಆ ದೇಶಗಳನ್ನು ಇದಕ್ಕಾಗಿ ಸಿದ್ಧಗೊಳಿಸುವುದಕ್ಕಾಗಿ ಒಟ್ಟು 500 ಮಿಲಿಯ ಡಾಲರ್ (ಸುಮಾರು 3,657 ಕೋಟಿ ರೂಪಾಯಿ) ಮೊತ್ತವನ್ನು ಖರ್ಚು ಮಾಡಲಾಗುವುದು ಎಂದು ಅವರು ಹೇಳಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News