ಪಂದ್ಯದ ವೇಳೆ ಅಂಪೈರ್ ರೊಂದಿಗೆ ಅಸಭ್ಯ ವರ್ತನೆ: 4 ಪಂದ್ಯಗಳಿಂದ ಶಾಕೀಬ್‌ ಅಮಾನತು

Update: 2021-06-12 14:50 GMT

ಢಾಕಾ: ಮೊಹಮ್ಮದನ್ ಸ್ಪೋರ್ಟಿಂಗ್ ಹಾಗೂ  ಅಬಹಾನಿ ಲಿಮಿಟೆಡ್ ನಡುವಿನ ಪಂದ್ಯದ ಸಂದರ್ಭದಲ್ಲಿ ಮೈದಾನದಲ್ಲಿ ಅಂಪೈರ್ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಸ್ಟಂಪ್ ಗಳನ್ನು ಕಿತ್ತೆಸೆದಿದ್ದ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಶಾಕೀಬ್ ಅಲ್ ಹಸನ್ ಅವರನ್ನು ಢಾಕಾ ಟ್ವೆಂಟಿ- 20 ಪ್ರೀಮಿಯರ್ ಲೀಗ್‌ನ  ನಾಲ್ಕು ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ.

"ಮಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ನಾಯಕ ಶಾಕೀಬ್ ಅಲ್ ಹಸನ್ ಅವರನ್ನು ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಸೊಕ್ಕಿನ ವರ್ತನೆ ತೋರಿದ್ದಕ್ಕೆ ನಾಲ್ಕು ಪಂದ್ಯಗಳಿಗೆ ನಿಷೇಧಿಸಲಾಗಿದೆ. ಅವರು ಎಂಟನೇ, ಒಂಬತ್ತನೇ, ಹತ್ತನೇ ಹಾಗೂ  ಹನ್ನೊಂದನೇ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ"ಎಂದು ಬಾಂಗ್ಲಾದೇಶದ ಕ್ರೀಡಾ ವೆಬ್ ಸೈಟ್ ವೊಂದು ವರದಿ ಮಾಡಿದೆ.

ಮೊಹಮ್ಮದನ್ ಡಿಎಲ್ಎಸ್ ವಿಧಾನದಿಂದ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತ್ತು. ಶಾಕೀಬ್ ಆಟದ ಸಮಯದಲ್ಲಿ ಎರಡು ಬಾರಿ ತನ್ನ ತಾಳ್ಮೆಯನ್ನು ಕಳೆದುಕೊಂಡು ಅಸಭ್ಯವಾಗಿದ್ದ ವರ್ತಿಸಿದ್ದರು. ಎದುರಾಳಿ ತಂಡವನ್ನು ಪ್ರತಿನಿಧಿಸುತ್ತಿದ್ದ  ಬಾಂಗ್ಲಾದೇಶ ತಂಡದ ಸಹ ಆಟಗಾರ ಮುಶ್ಫಿಕುರಹೀಮ್ ವಿರುದ್ಧ ಸಲ್ಲಿಸಿದ್ದ ಲೆಗ್-ಬಿಫೋರ್ ಮನವಿಯನ್ನು ಅಂಪೈರ್ ತಿರಸ್ಕರಿಸಿದ ನಂತರ ಸ್ಟಂಪ್‌ಗಳಿಗೆ ತುಳಿದಿರುವ ಹಸನ್ ಬಳಿಕ  ಅಬಹಾನಿ ಇನ್ನಿಂಗ್ಸ್‌ನ ಕನಿಷ್ಠ ಆರು ಓವರ್‌ಗಳನ್ನು ಪೂರ್ಣಗೊಳಿಸಲು ಒಂದು ಎಸೆತ ಬಾಕಿ ಇರುವಾಗ ಅಂಪೈರ್ ಪಿಚ್ ಮೇಲೆ ಹೊದಿಕೆ ಹಾಕಲು  ಸೂಚಿಸಿದಾಗ ಸಿಟ್ಟಿಗೆದ್ದ ಹಸನ್ , ಸ್ಟಂಪ್ ಗಳನ್ನು ಕಿತ್ತುಹಾಕಿದ್ದರು.

ಪಂದ್ಯ ಮತ್ತೆ ಪ್ರಾರಂಭವಾಯಿತು ಶಾಕೀಬ್ ಅವರ ತಂಡವು ಸುಲಭವಾಗಿ ಗೆದ್ದಿತು. ಶಾಕೀಬ್ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News