ಲಂಡನ್: ಫೆಲೆಸ್ತೀನೀಯರ ಹಕ್ಕುಗಳಿಗೆ ಬೆಂಬಲ ಸೂಚಿಸಿ ಸಾವಿರಾರು ಮಂದಿಯ ಮೆರವಣಿಗೆ

Update: 2021-06-13 16:32 GMT
PHOTO :twitter.com

ಲಂಡನ್, ಜೂ. 13: ಫೆಲೆಸ್ತೀನಿಯರ ಹಕ್ಕುಗಳಿಗೆ ಬೆಂಬಲ ನೀಡುವಂತೆ ಜಿ7 ದೇಶಗಳನ್ನು ಒತ್ತಾಯಿಸಿ ಶನಿವಾರ ಲಂಡನ್ ನಲ್ಲಿ ಸಾವಿರಾರು ಮಂದಿ ಮೆರವಣಿಗೆ ನಡೆಸಿದರು.

ಜಿ7 ದೇಶಗಳ ಮೂರು ದಿನಗಳ ಶೃಂಗಸಭೆ ನೈರುತ್ಯ ಇಂಗ್ಲೆಂಡ್ ನಲ್ಲಿ ನಡೆಯುತ್ತಿದೆ.

‘ರೆಸಿಸ್ಟ್ ಜಿ7: ಡೇ ಆಫ್ ಆ್ಯಕ್ಷನ್ ಫಾರ್ ಇಂಟರ್ನ್ಯಾಶನಲ್ ಜಸ್ಟೀಸ್’ ಎಂಬ ಹೆಸರಿನಲ್ಲಿ ಪ್ರದರ್ಶನಕಾರರು ಸಾವಿರಾರು ಸಂಖ್ಯೆಯಲ್ಲಿ ಡೌನಿಂಗ್ ಸ್ಟ್ರೀಟ್ನಲ್ಲಿರುವ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ರ ಅಧಿಕೃತ ನಿವಾಸದತ್ತ ಮೆರವಣಿಗೆಯಲ್ಲಿ ಸಾಗಿದರು. ಈ ಸಂದರ್ಭದಲ್ಲಿ ಅವರು ಆಕ್ರಮಿತ ಫೆಲೆಸ್ತೀನ್ ಭೂಭಾಗದಲ್ಲಿ ಇಸ್ರೇಲ್ ಅನುಸರಿಸುತ್ತಿರುವ ನೀತಿಗಳನ್ನು ಪ್ರತಿಭಟಿಸಿದರು.

ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧಾಪರಾಧದಲ್ಲಿ ಬ್ರಿಟನ್ ಮತ್ತು ಜಿ7 ದೇಶಗಳ ಸರಕಾರಗಳು ಶಾಮೀಲಾಗಿವೆ ಎಂದು ಆರೋಪಿಸಿದ ಅವರು, ಇದು ನಿಲ್ಲಬೇಕೆಂದು ಒತ್ತಾಯಿಸಿದರು.

ಬ್ರಿಟನ್ ನ ಪ್ರತಿಪಕ್ಷ ಲೇಬರ್ ಪಕ್ಷದ ಮಾಜಿ ಮುಖ್ಯಸ್ಥ ಜೆರೆಮಿ ಕಾರ್ಬಿನ್ ಮೆರವಣಿಗೆಯಲ್ಲಿ ಭಾಗವಹಿಸಿದರು ಹಾಗೂ ಜನರನ್ನು ಉದ್ದೇಶಿಸಿ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News