×
Ad

ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ನಂತರ ನೆನಪಿನ ಶಕ್ತಿ ಕಡಿಮೆಯಾಗಿದೆ: ಡು ಪ್ಲೆಸಿಸ್

Update: 2021-06-14 13:50 IST

ಅಬುಧಾಬಿ: ಇಲ್ಲಿ ಶನಿವಾರ ನಡೆದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟ್ವೆಂಟಿ- 20 ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ನಂತರ ಸ್ವಲ್ಪ ನೆನಪಿನ ಶಕ್ತಿ ಕಳೆದುಕೊಂಡಿದ್ದೇನೆ. ಆದರೆ ಶೀಘ್ರವಾಗಿ ಕ್ರಿಕೆಟ್ ಗೆ ಮರಳುವ ವಿಶ್ವಾಸವಿದೆ  ಎಂದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಫ್ ಡು ಪ್ಲೆಸಿಸ್ ಹೇಳಿದ್ದಾರೆ,

ಪೇಶಾವರ ಝಲ್ಮಿ ವಿರುದ್ಧದ  61 ರನ್‌ಗಳ ಸೋತ ಪಂದ್ಯಲ್ಲಿ ಬೌಂಡರಿ ಉಳಿಸಲು ಪ್ರಯತ್ನಿಸುತ್ತಿದ್ದಾಗ ಡು ಪ್ಲೆಸಿಸ್ , ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಸಹ ಆಟಗಾರ ಮುಹಮ್ಮದ್ ಹಸ್ನೈನ್ ಗೆ ಡಿಕ್ಕಿ ಹೊಡೆದಿದ್ದರು.

"ನನ್ನನ್ನು ಬೆಂಬಲಿಸಿ ಕಳುಹಿಸಿದ ಎಲ್ಲ ಸಂದೇಶಗಳಿಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು  ದ.ಆಫ್ರಿಕಾ ಮಾಜಿ ನಾಯಕ ಡು ಪ್ಲೆಸಿಸ್ ರವಿವಾರ ಟ್ವೀಟ್ ಮಾಡಿದ್ದಾರೆ.

36 ವರ್ಷದ ಪ್ಲೆಸಿಸ್ ಸಹ ಆಟಗಾರನಿಗೆ ಢಿಕ್ಕಿ ಹೊಡೆದ ಬಳಿಕ ಗ್ಲಾಡಿಯೇಟರ್ಸ್ ತಂಡದ ಫಿಸಿಯೋ ಅವರು ಆಸ್ಪತ್ರೆಗೆ ಕರೆದೊಯ್ಯುವ  ಮೊದಲು ಚಿಕಿತ್ಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News