ಯೂರೊ-2020 ಫುಟ್ಬಾಲ್ ಟೂರ್ನಿ: ಫ್ರಾನ್ಸ್‌ಗೆ ಗೆಲುವಿನ ಉಡುಗೊರೆ ನೀಡಿದ ಜರ್ಮನಿ ತಂಡದ ಹ್ಯುಮ್ಮೆಲ್ಸ್

Update: 2021-06-16 04:12 GMT
Photo credit: uefa website

ಮ್ಯೂನಿಚ್, ಜೂ.16: ರಕ್ಷಣಾ ಆಟಗಾರ ಮ್ಯಾಟ್ಸ್ ಹುಮ್ಮೆಲ್ಸ್ ಹೊಡೆದ ಸ್ವಯಂ ಗೋಲು ವಿಶ್ವಚಾಂಪಿಯನ್ ಫ್ರಾನ್ಸ್ ತಂಡ ಯೂರೊ-2020 ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪ್ರಬಲ ಜರ್ಮನಿ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಲು ಕಾರಣವಾಯಿತು.

ವಿಶ್ವ ಚಾಂಪಿಯನ್ನರು 20ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿದರು. ಮಿಡ್‌ ಫೀಲ್ಡರ್ ಪಾಲ್ ಪೊಗಾಬಾ ಅವರ ಮಿಂಚಿನ ಪಾಸನ್ನು ಲೂಕಸ್ ಹೆರ್ನಂಡೆಸ್ ಗೋಲುಪೆಟ್ಟಿಗೆ ಬಳಿ ಶರವೇಗದಿಂದ ಕಳುಹಿಸಿದರು. ಡಿಫೆಂಡರ್ ಹ್ಯುಮ್ಮೆಲ್ಸ್ ಬಾಲ್ ಕ್ಲಿಯರ್ ಮಾಡುವ ಯತ್ನದಲ್ಲಿ ತನ್ನದೇ ನೆಟ್‌ನೊಳಗೆ ಸೇರಿಸಿದರು!

ಇಂದಿನ ವಿಜಯಕ್ಕೆ ಫ್ರಾನ್ಸ್ ಅರ್ಹವಾಗಿತ್ತು. ಮುಂದಿನ ಪಂದ್ಯವನ್ನು ಶನಿವಾರ ಜರ್ಮನಿ ಪೋರ್ಚುಗಲ್ ಜತೆ ಆಡಲಿದ್ದರೆ, ಫ್ರಾನ್ಸ್ ಹಂಗೇರಿ ವಿರುದ್ಧ ಸೆಣೆಸಲಿದೆ.

ಜರ್ಮನಿಯ ದಾಖಲೆ 50ನೇ ಯೂರೊ ಪಂದ್ಯ ಭರ್ಜರಿ ಆರಂಭದ ಬಳಿಕ ನಿರಾಶಾದಾಯಕವಾಯಿತು. ಪ್ರವಾಸಿ ತಂಡದ ಆಟಗಾರರು ನಿಧಾನವಾಗಿ ಒತ್ತಡ ಹೇರಿದ್ದು, ತಮ್ಮ ವೇಗಕ್ಕೆ ಕಡಿವಾಣ ಹಾಕಿಕೊಂಡದ್ದು ಕೊನೆಗೂ ಫಲ ನೀಡಿತು.

ಪೊಗ್ಬಾ ನೀಡಿದ ಅದ್ಭುತ ಕ್ರಾಸ್‌ಫೀಲ್ಡ್ ಪಾಸನ್ನು ಹೆರ್ನಂಡ್ಸ್, ಎದುರಾಳಿ ತಂಡದ ರಕ್ಷಣಾ ಆಟಗಾರ ಹ್ಯುಮ್ಮಲ್ಸ್ ಅವರನ್ನು ವಂಚಿಸುವ ಪ್ರಯತ್ನ ಮಾಡಿದರು. ಎರಡು ವರ್ಷಗಳ ಕಾಲ ತಂಡದಿಂದ ಹೊರಗಿದ್ದ ಹಮ್ಮೆಲ್ಸ್ ಈ ಟೂರ್ನಿಗಾಗಿ ವಾಪಸ್ಸಾಗಿದ್ದರು. ಈ ಹಂತದಲ್ಲಿ ಹಮ್ಮಲ್ಸ್ ತಮ್ಮದೇ ಗೋಲ್‌ಕೀಪರ್ ಮ್ಯಾನ್ಯುಯೆಲ್ ನೇಮರ್ ಕಡೆಗೆ ತಳ್ಳಿದರು.

ತವರಿನ ಪ್ರೇಕ್ಷಕರ ಮುಂದೆ ಪ್ರಭಾವಿ ಪ್ರದರ್ಶನ ನೀಡಲಾಗದೇ ಜರ್ಮನ್ನರು ಹತಾಶರಾದರು. 2018ರ ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಹತಾಶೆ ಪ್ರೇಕ್ಷಕರಿಗೆ ಮರುಕಳಿಸುವಂತೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News