ಪತ್ರಿಕಾಗೋಷ್ಠಿಯಲ್ಲಿ ತನ್ನೆದುರಿಗಿದ್ದ ಬಿಯರ್ ಬಾಟಲ್ ನ್ನು ಬದಿಗಿಟ್ಟ ಪೌಲ್ ಪೊಗ್ಬಾ

Update: 2021-06-16 13:34 GMT
photo: twitter

ಮ್ಯೂನಿಚ್: ಯುಇಎಫ್ಎ ಯುರೋ ಟೂರ್ನಮೆಂಟ್ ನಲ್ಲಿ  ಜರ್ಮನಿಯ ವಿರುದ್ಧ ಫ್ರಾನ್ಸ್  ತಂಡ 1-0 ಜಯ ಸಾಧಿಸಿದ ನಂತರ  ನಡೆದ ಪತ್ರಿಕಾಗೋಷ್ಠಿಯಲ್ಲಿ ಫ್ರಾನ್ಸ್ ಫುಟ್ಬಾಲ್ ಸ್ಟಾರ್ ಪೌಲ್ ಪೊಗ್ಬಾ ಅವರು ತಮ್ಮ ಮುಂದೆ ಇಟ್ಟಿದ್ದ ಬಿಯರ್ ಬಾಟಲಿಯನ್ನುತೆಗೆದು  ಪಕ್ಕಕ್ಕಿಟ್ಟ ಘಟನೆ ನಡೆದಿದೆ.

ಈಗ ನಡೆಯುತ್ತಿರುವ ಯುರೋ 2020 ಫುಟ್ಬಾಲ್ ಪಂದ್ಯಾವಳಿಯ ಕುರಿತ ಪತ್ರಿಕಾಗೋಷ್ಠಿ ವೇಳೆ  ಈ ರೀತಿ ನಡೆದುಕೊಂಡಿರುವ ಎರಡನೇ ಆಟಗಾರ ಪೊಗ್ಬಾ ಆಗಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಮಿಡ್ ಫೀಲ್ಡರ್  ಪೊಗ್ಬಾ ಮುಸ್ಲಿಂ ಆಗಿದ್ದು, ಅವರು ಮದ್ಯಪಾನ ಮಾಡುವುದಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಮುಂದೆ ಇಟ್ಟಿದ್ದ ಕೋಕಾ-ಕೋಲಾ ಬಾಟಲಿಗಳನ್ನು ತೆಗೆದು ಎಲ್ಲರೂ ನೀರನ್ನು ಕುಡಿಯುವಂತೆ ಪ್ರೋತ್ಸಾಹಿಸಿದ್ದರು

ಫ್ರಾನ್ಸ್  ತಂಡ ಡಿಫೆಂಡರ್ ಮ್ಯಾಟ್ಸ್ ಹಮ್ಮೆಲ್ಸ್ ಅವರು  20 ನೇ ನಿಮಿಷದಲ್ಲಿ ಗಳಿಸಿದ  ಸ್ವಯಂ ಗೋಲು ನೆರವಿನಿಂದ  ಜರ್ಮನಿಯ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತ್ತು.

ಮೂರು ಅಂಕ ಗಳಿಸಿರುವ ಫ್ರಾನ್ಸ್ ಗ್ರೂಪ್ ಎಫ್ ನಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ,  ಫ್ರಾನ್ಸ್ ಜೂನ್ 19 ರಂದು ಹಂಗೇರಿಯನ್ನು ಎದುರಿಸಲಿದ್ದು, ಜೂನ್ 24 ರಂದು ಪೋರ್ಚುಗಲ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News