ಶೀಘ್ರವೇ ಅವಧಿ ಮೀರಲಿರುವ ಇಸ್ರೇಲ್‌ ನ ಕೋವಿಡ್‌ ಲಸಿಕೆಗಳನ್ನು ತಿರಸ್ಕರಿಸಿದ ಫೆಲೆಸ್ತೀನ್

Update: 2021-06-19 08:31 GMT

ಟೆಲ್ ಅವೀವ್ : ಶೀಘ್ರ ಅವಧಿ ಮೀರಲಿರುವ ಕೋವಿಡ್-19 ಲಸಿಕೆಗಳನ್ನು  ಇಸ್ರೇಲ್ ನಿಂದ ಪಡೆಯುವ ಕುರಿತಾದ ಒಪ್ಪಂದವನ್ನು ಫೆಲೆಸ್ತೀನ್ ಪ್ರಾಧಿಕಾರವು  ರದ್ದುಗೊಳಿಸಿದೆ. ಇಸ್ರೇಲ್‍ನಿಂದ ಆರಂಭಿಕವಾಗಿ ಪೂರೈಕೆಯಾದ ಕೋವಿಡ್ ಲಸಿಕೆಗಳು ಒಪ್ಪಂದದಂತೆ ಒಪ್ಪಿಗೆಯಾದ ದಿನಾಂಕಕ್ಕಿಂತ ಬಹಳಷ್ಟು ಬೇಗ  ಅವಧಿ ಮೀರಲಿವೆ ಎಂದು ತಿಳಿದ ನಂತರ ಮೇಲಿನ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫೆಲೆಸ್ತೀನ್‍ನ ಆರೋಗ್ಯ ಸಚಿವೆ ಮೈ ಅಲ್ಕೈಲ ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಫೆಲೆಸ್ತೀನ್  ಈ ಹಿಂದೆ ಕೈಗೊಂಡ ಲಸಿಕೆ ಒಪ್ಪಂದದಂತೆ ಫೆಲೆಸ್ತೀನ್ ಗೆ ಇಸ್ರೇಲ್ 10.4 ಲಕ್ಷ ಫೈಝರ್-ಬಯೋಎನ್‍ಟೆಕ್ ಕೋವಿಡ್ ಲಸಿಕೆ ಡೋಸ್‍ಗಳನ್ನು ನೀಡಲಿತ್ತು ಹಾಗೂ ಇದರ ಬದಲು ಇದೇ ವರ್ಷ ಇಸ್ರೇಲ್ ಫೆಲೆಸ್ತೀನ್‍ನಿಂದ ಅಷ್ಟೇ ಸಂಖ್ಯೆಯ ಡೋಸ್‍ಗಳನ್ನು ಪಡೆಯುವುದೆಂದು ತೀರ್ಮಾನವಾಗಿತ್ತು.

"ಆದರೆ ಲಸಿಕೆಗಳ ಎಕ್ಸ್ ಪೈರಿ ದಿನಾಂಕ ಜುಲೈ ಅಥವಾ ಆಗಸ್ಟ್ ಎಂದು ಅವರು ಹೇಳಿದ್ದರು. ಇದು ನಮಗೆ ಬಳಕೆಗೆ ಸಾಕಷ್ಟು ಸಮಯ ಒದಗಿಸಿತ್ತು. ಆದರೆ ಮೊದಲು ಪೂರೈಕೆಯಾದ ಲಸಿಕೆಗಳ ಎಕ್ಸ್ ಪೈರಿ ಅವಧಿ ಜೂನ್ ಆಗಿತ್ತು. ಈ ಲಸಿಕೆ ಬಳಸಲು ನಮಗೆ ಸಾಕಷ್ಟು ಸಮಯಾವಕಾಶವಿಲ್ಲ ಆದುದರಿಂದ ನಾವು ಅದನ್ನು ತಿಸ್ಕರಿಸಿದ್ದೇವೆ,'' ಎಂದು  ಸಚಿವೆ ತಿಳಿಸಿದ್ದಾರೆ.

ಇಸ್ರೇಲ್ ಮೊದಲ ಹಂತದಲ್ಲಿ ಪೂರೈಸಿದ್ದ 90,000 ಡೋಸ್ ಲಸಿಕೆಗಳನ್ನು ಫೆಲೆಸ್ತೀನ್ ವಾಪಸ್ ಕಳುಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News