ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಿದ್ಧತೆಗೆ 10 ಕೋಟಿ ರೂ.ದೇಣಿಗೆ ನೀಡಲಿದೆ ಬಿಸಿಸಿಐ

Update: 2021-06-20 15:20 GMT
photo: twitter

ಹೊಸದಿಲ್ಲಿ: ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ದೇಶದ ಕ್ರೀಡಾಪಟುಗಳ ತರಬೇತಿ ಹಾಗೂ  ಸಿದ್ಧತೆಗಳಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ರವಿವಾರ 10 ಕೋಟಿ ರೂ.ದೇಣಿಗೆ ನೀಡಲಿರುವುದಾಗಿ ಪ್ರಕಟಿಸಿದೆ.

ಮಂಡಳಿಯ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ  ಕಾರ್ಯದರ್ಶಿ ಜಯ ಶಾ ಭಾಗವಹಿಸಿದ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

"ಹೌದು, ಬಿಸಿಸಿಐ ಒಲಿಂಪಿಕ್ಸ್  ತಂಡಕ್ಕೆ ಸಹಾಯ ಮಾಡಲಿದೆ. ಅಪೆಕ್ಸ್ ಕೌನ್ಸಿಲ್ 10 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ" ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

"ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ನಮ್ಮ ಕ್ರೀಡಾಪಟುಗಳ ತಯಾರಿ ಹಾಗೂ  ಇತರ ತುರ್ತು ಉದ್ದೇಶಗಳಿಗಾಗಿ ಇದನ್ನು (ನಿಧಿ) ಬಳಸಲಾಗುತ್ತದೆ. ಕ್ರೀಡಾ ಸಚಿವಾಲಯ ಹಾಗೂ  ಭಾರತೀಯ ಒಲಿಂಪಿಕ್ಸ್  ಅಸೋಸಿಯೇಶನ್ ​​(ಐಒಎ) ಜೊತೆಗೆ ಮಾತನಾಡಿದ ನಂತರ ಪಾವತಿಯ ವಿಧಾನಗಳನ್ನು ಅಂತಿಮಗೊಳಿಸಲಾಗುತ್ತದೆ’’ ಎಂದು ಶಾ ತಿಳಿಸಿದರು.

ಟೋಕಿಯೊ ಒಲಿಂಪಿಕ್ಸ್ ಜುಲೈ 23 ರಿಂದ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News