ಶಾಟ್ ಪುಟ್ ಪಟು ತೇಜಿಂದರ್ ತೂರ್ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ

Update: 2021-06-21 15:15 GMT

  ಪಟಿಯಾಲ: ಶಾಟ್-ಪುಟ್ ಪಟು ತೇಜಿಂದರ್ ಸಿಂಗ್ ತೂರ್ ಅವರು ಭಾರತೀಯ ಗ್ರ್ಯಾಂಡ್ ಪ್ರಿಕ್ಸ್-4 ರಲ್ಲಿ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ರಾಷ್ಟ್ರೀಯ ಮಹಿಳೆಯರ 4x100 ಮೀಟರ್ ರಿಲೇ ತಂಡ ಹಾಗೂ  ದ್ಯುತಿ ಚಂದ್ ಅವರು ದೇಶದ ಹಿಂದಿನ ಅತ್ಯುತ್ತಮ ಗುರುತನ್ನು ಮೀರಿಸಿದ್ದಾರೆ.

ತೂರ್ 21.49 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆಯುವೊಂದರೊಂದಿಗೆ ಒಲಿಂಪಿಕ್ಸ್  ಅರ್ಹತಾ ಗಡಿ ದಾಟಿದರು ಹಾಗೂ  ತಮ್ಮದೇ ಆದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಈ ಪಂದ್ಯಾವಳಿಯಲ್ಲಿ ಒಲಿಂಪಿಕ್ಸ್   ಅರ್ಹತಾ ಪ್ರಯತ್ನ 21.10 ಮೀ. ಆಗಿದೆ.

ಹಿಂದಿನ ದಾಖಲೆಯು ತೂರ್ ಅವರ ಹೆಸರಿನಲ್ಲಿತ್ತು, 2019ರಲ್ಲಿ 20.92 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದು ದಾಖಲೆ ನಿರ್ಮಿಸಿದ್ದರು.

ಆದಾಗ್ಯೂ, ಮಹಿಳಾ ರಿಲೇ ತಂಡವು ತನ್ನದೇ ಆದ ದಾಖಲೆಯ ಪ್ರಯತ್ನದ ಹೊರತಾಗಿಯೂ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಪಡೆಯಲು ವಿಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News