ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ಭೋಜನ ವಿರಾಮಕ್ಕೆ ನ್ಯೂಝಿಲ್ಯಾಂಡ್ 135/5

Update: 2021-06-22 13:08 GMT
photo: twitter

ಸೌತಾಂಪ್ಟನ್: ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದ ಐದನೇ ದಿನದಾಟವಾದ ಮಂಗಳವಾರ ಭೋಜನ ವಿರಾಮದ ವೇಳೆಗೆ ನ್ಯೂಝಿಲ್ಯಾಂಡ್ 135 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಗಳನ್ನು ಕಳೆದುಕೊಂಡಿದೆ.

ಮಳೆಯಿಂದಾಗಿ 5ನೇ ದಿನದಾಟದ ಆರಂಭ ವಿಳಂಬವಾಯಿತು.

ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿಲಿಯಮ್ಸನ್ ಹಾಗೂ ಹಿರಿಯ ಬ್ಯಾಟ್ಸ್ ಮನ್  ರಾಸ್ ಟೇಲರ್ ದೊಡ್ಡ ಜೊತೆಯಾಟ ನಡೆಸಲು ವಿಫಲರಾದರು. ರಾಸ್ ಟೇಲರ್ (11) ವಿಕೆಟನ್ನು ಉರುಳಿಸಿದ ಮುಹಮ್ಮದ್ ಶಮಿ ಈ ಜೋಡಿಯನ್ನು ಬೇರ್ಪಡಿಸಿದರು.

ಹೆನ್ರಿ ನಿಕೊಲ್ಸ್ (7) ಹೆಚ್ಚುಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಇಶಾಂತ್ ಶರ್ಮಾ ಅವಕಾಶ ನೀಡಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವಾಟ್ಲಿಂಗ್ ಕೇವಲ 1 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ  ಕ್ಲೀನ್ ಬೌಲ್ಡಾದರು.

ಭೋಜನ ವಿರಾಮದ ವೇಳೆಗೆ ನಾಯಕ ವಿಲಿಯಮ್ಸನ್ (ಔಟಾಗದೆ 19) ಹಾಗೂ ಗ್ರ್ಯಾಂಡ್ ಹೋಮ್(ಔಟಾಗದೆ 0)ಕ್ರೀಸ್ ಕಾಯ್ದುಕೊಂಡಿದ್ದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಗಳಾದ ಇಶಾಂತ್ ಶರ್ಮಾ(2-27) ಹಾಗೂ ಮುಹಮ್ಮದ್ ಶಮಿ(2-31)ತಲಾ ಎರಡು ವಿಕೆಟ್ ಪಡೆದರು. ರವಿಚಂದ್ರನ್ ಅಶ್ವಿನ್ 20 ರನ್ ನೀಡಿ ಒಂದು ವಿಕೆಟನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News