ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್: ನ್ಯೂಝಿಲ್ಯಾಂಡ್ 249 ರನ್ ಗೆ ಆಲೌಟ್

Update: 2021-06-22 16:32 GMT
photo: The Hindu

ಸೌತಾಂಪ್ಟನ್: ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದ ಐದನೇ ದಿನದಾಟವಾದ ಮಂಗಳವಾರ ನ್ಯೂಝಿಲ್ಯಾಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 99.2 ಓವರ್ ಗಳಲ್ಲಿ 249 ರನ್ ಗಳಿಸಿ ಆಲೌಟ್ ಆಗಿದೆ. 32 ರನ್ ಅಲ್ಪ ಮುನ್ನಡೆ ಪಡೆದಿದೆ.

ವೇಗದ ಬೌಲರ್ ಗಳಾದ ಮುಹಮ್ಮದ್ ಶಮಿ(4/76) ಹಾಗೂ ಇಶಾಂತ್ ಶರ್ಮಾ(3/48), ಸ್ಪಿನ್ನರ್ ಆರ್. ಅಶ್ವಿನ್(2/28) ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಮಾತ್ರ ಇಂದು ಪ್ರತಿರೋಧ ಒಡ್ಡಿದರು. ಇಶಾಂತ್ ಗೆ ವಿಕೆಟ್ ಒಪ್ಪಿಸುವ ಮೊದಲು 49 ರನ್(177 ಎಸೆತ) ಗಳಿಸಿದರು.

ನ್ಯೂಝಿಲ್ಯಾಂಡ್ ಪರ ಡಿವೊನ್ ಕಾನ್ವೆ ಅಗ್ರ ಸ್ಕೋರರ್ (54) ಎನಿಸಿಕೊಂಡರು. ಲಥಾಮ್ (30) ಹಾಗೂ ಸೌಥಿ(30) ಎರಡಂಕೆಯ ಸ್ಕೋರ್ ಗಳಿಸಿದರು.  

 ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿಲಿಯಮ್ಸನ್ ಹಾಗೂ ಹಿರಿಯ ಬ್ಯಾಟ್ಸ್ ಮನ್  ರಾಸ್ ಟೇಲರ್ ದೊಡ್ಡ ಜೊತೆಯಾಟ ನಡೆಸಲು ವಿಫಲರಾದರು. ರಾಸ್ ಟೇಲರ್ (11) ವಿಕೆಟನ್ನು ಉರುಳಿಸಿದ ಮುಹಮ್ಮದ್ ಶಮಿ ಈ ಜೋಡಿಯನ್ನು ಬೇರ್ಪಡಿಸಿದರು. ಹೆನ್ರಿ ನಿಕೊಲ್ಸ್ (7) ಹೆಚ್ಚುಹೊತ್ತು ಕ್ರೀಸ್ ನಲ್ಲಿ ನಿಲ್ಲಲು ಇಶಾಂತ್ ಶರ್ಮಾ ಅವಕಾಶ ನೀಡಲಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವಾಟ್ಲಿಂಗ್ ಕೇವಲ 1 ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ  ಕ್ಲೀನ್ ಬೌಲ್ಡಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News