×
Ad

ಯೂರೋ-2020: ಕ್ವಾರ್ಟರ್ ಫೈನಲ್‌ಗೆ ಇಟಲಿ

Update: 2021-06-27 09:11 IST
ಫೋಟೊ - Euro 2020 Twitter handle

ಲಂಡನ್ : ಹಲವು ರೋಚಕ ಕ್ಷಣಗಳಿಗೆ ಕಾರಣವಾದ ಯೂರೋ-2020 ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‌ನ ಹೆಚ್ಚುವರಿ ಅವಧಿಯಲ್ಲಿ ಆಸ್ಟ್ರಿಯಾ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಇಟಲಿ ಅಂತಿಮ ಎಂಟರ ಘಟ್ಟಕ್ಕೆ ಮುನ್ನಡೆಯಿತು.

ಬದಲಿ ಆಟಗಾರರಾಗಿದ್ದ ಫೆಡೆರಿಕೊ ಚಿಸಾ ಮತ್ತು ಮಟಿವೊ ಪೆಸ್ಸಿನಾ ಹೆಚ್ಚುವರಿ ಅವಧಿಯಲ್ಲಿ ಎರಡು ಗೋಲುಗಳನ್ನು ಹೊಡೆಯುವ ಮೂಲಕ ತಂಡದ ವಿಜಯದ ರೂವಾರಿಗಳಾದರು.

ಇದೇ ಮೊದಲ ಬಾರಿಗೆ ಯೂರೋಪಿಯನ್ ಚಾಂಪಿಯನ್‌ಶಿಪ್‌ನ ನಾಕೌಟ್ ಹಂತ ತಲುಪಿದ್ದ ಆಸ್ಟ್ರಿಯಾದ ಮಾರ್ಕೊ ಅರ್ನ್‌ಟೊವಿಕ್ ಹೆಚ್ಚುವರಿ ಅವಧಿಯಲ್ಲಿ ಮೊದಲ ಗೋಲ್ ಹೊಡೆದು ತಂಡಕ್ಕೆ ಮುನ್ನಡೆ ಒದಗಿಸಿ, ಬಲಿಷ್ಠ ಇಟಲಿ ಪಾಳಯದಲ್ಲಿ ಆತಂಕ ಮೂಡಿಸಿದರು.

ಇಟಲಿ ಪರವಾಗಿ ನಾಲ್ವರು ಆಕ್ರಮಣಕಾರಿ ಬದಲಿ ಆಟಗಾರರನ್ನು ಮೈದಾನಕ್ಕೆ ಇಳಿಸಿದ್ದು ಕೊನೆಗೂ ಫಲ ನೀಡಿತು. ಈ ಹಂತದಲ್ಲಿ ಚೀಸಾ ಗೋಲು ಹೊಡೆದು ಸಮಬಲ ಸಾಧಿಸಲು ನೆರವಾದರು. ಆ ಹಂತದಲ್ಲಿ ಅಟ್ಲಾಂಟಾ ಮಿಡ್‌ಫೀಲ್ಡರ್ ಪೆಸ್ಸಿನಾ ಹೊಡೆದ ಗೋಲು ಆಸ್ಟ್ರಿಯಾದ ಆಸೆಯನ್ನು ನುಚ್ಚುನೂರುಗೊಳಿಸಿತು. 95ನೇ ನಿಮಿಷದಲ್ಲಿ ಚೀಸಾ ಗೋಲು ಹೊಡೆದರೆ ಮತ್ತೆ ಹತ್ತೇ ನಿಮಿಷಗಳ ಅಂತರದಲ್ಲಿ ಮತ್ತೊಂದು ಭರ್ಜರಿ ಗೋಲು ಗಳಿಸುವ ಮೂಲಕ ಇಟಲಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News