ಕುವೈತ್: ಜಗತ್ತಿನಲ್ಲೇ ಗರಿಷ್ಠ ತಾಪಮಾನ ದಾಖಲು

Update: 2021-06-27 17:17 GMT
ಸಾಂದರ್ಭಿಕ ಚಿತ್ರ

ದುಬೈ,ಜು.21: ಕುವೈತ್ ನಲ್ಲಿ ಶನಿವಾರ 53.2 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ದಾಖಲಾಗಿದ್ದು, ಇದು ಈ ವರ್ಷದಲ್ಲಿ ಜಗತ್ತಿನಲ್ಲೇ ಅತ್ಯಧಿಕ ತಾಪಮಾನವಾಗಿದೆಯೆಂದು ಅಮೆರಿಕದ ಎಲ್ ಡೊರಾಡೋ ಹವಾಮಾನ ಇಲಾಖೆ ತಿಳಿಸಿದೆ. ಈ ಸಂಸ್ಥೆಯು ಜಗತ್ತಿನ ಎಲ್ಲಾ ದೇಶಗಳ ಹವಾಮಾನ ನಿಲಯಗಳಿಂದ ದತ್ತಾಂಶಗಳನ್ನು ಸಂಗ್ರಹಿಸುತ್ತದೆ.

ಕುವೈತ್ ನ ನಗರವಾದ ನವಾಸಿಬ್ ನಲ್ಲಿ 53.2 ಡಿಗ್ರಿ ತಾಪಮಾನ ದಾಖಲಾಗಿದ್ದು, ಇದು ಈ ವರ್ಷ ಜಗತ್ತು ಕಂಡ ಅತ್ಯಧಿಕ ತಾಪಮಾನವಾಗಿದೆ. ಮಧ್ಯಪ್ರಾಚ್ಯದ ರಾಷ್ಟ್ರವಾದ ಇರಾನ್ನಲ್ಲಿ 50.1 ಡಿಗ್ರಿ ಸೆಲ್ಸಿಯಸ್ ಹಾಗೂ ಕುವೈತ್ ನ ಜಹ್ರಾದಲ್ಲಿ 49.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
   
ಒಂದೇ ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಜಗತ್ತಿನಲ್ಲೇ ಗರಿಷ್ಠ ತಾಪಮಾನವು ಕುವೈತ್ನಲ್ಲಿ ದಾಖಲಾಗಿರುವುದು ಇದು ಎರಡನೆ ಸಲವಾಗಿದೆ. ಜೂನ್ 5ರಂದು ವಿಶ್ವದ 143 ರಾಜಧಾನಿಗಳ ಪೈಕಿ ಕುವೈತ್ ನಗರ ಹಾಗೂ ಕತರ್ ರಾಜಧಾನಿ ದೋಹಾದಲ್ಲಿ ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News