ಕೊವ್ಯಾಕ್ಸಿನ್ ಖರೀದಿ ಒಪ್ಪಂದ ತಾತ್ಕಾಲಿಕ ರದ್ದುಗೊಳಿಸಿದ ಬ್ರೆಝಿಲ್

Update: 2021-06-30 09:46 GMT
ಸಾಂದರ್ಭಿಕ ಚಿತ್ರ (PTI)

ಹೈದರಾಬಾದ್: ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆ ಕೋವ್ಯಾಕ್ಸಿನ್‍ನ 2 ಕೋಟಿ ಡೋಸ್‍ಗಳನ್ನು ಖರೀದಿಸುವುದಾಗಿ ಒಪ್ಪಿಕೊಂಡಿದ್ದ ಬ್ರೆಝಿಲ್ ಸರಕಾರ ಈ ಒಪ್ಪಂದದಲ್ಲಿ ಅವ್ಯವಹಾರ ಆರೋಪಗಳು ಕೇಳಿ ಬಂದ ನಂತರ ಒಪ್ಪಂದವನ್ನು ರದ್ದುಗೊಳಿಸಿದೆ.

"ಸಿಜಿಯು ಶಿಫಾರಸಿನ ಮೇರೆಗೆ ಕೊವ್ಯಾಕ್ಸಿನ್ ಖರೀದಿ ಕುರಿತ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ,'' ಎಂದು ಬ್ರೆಝಿಲ್ ಆರೋಗ್ಯ ಸಚಿವ ಮಾರ್ಸೆಲೊ ಖ್ವಿರೋಗ ಟ್ವೀಟ್ ಮಾಡಿದ್ದಾರೆ. "ಸಿಜಿಯುವಿನ ಆರಂಭಿಕ ಪರಿಶೀಲನೆಯಲ್ಲಿ ಅವ್ಯವಹಾರಗಳು ಕಂಡು ಬಂದಿಲ್ಲ ಹಾಗೂ ಕೆಲ ನಿಯಮಗಳಿಗೆ ಬದ್ಧತೆ ಬಾಕಿಯಿರುವುದರಿಂದ ಒಪ್ಪಂದ ರದ್ದು ಪಡಿಸಲು ನಿರ್ಧರಿಸಲಾಗಿದೆ,'' ಎಂದು ಅವರು ಹೇಳಿದ್ದಾರೆ.

ಕೊವ್ಯಾಕ್ಸಿನ್ ಖರೀದಿ ಒಪ್ಪಂದ ಕುರಿತಂತೆ ಬ್ರೆಝಿಲ್‍ನ ಅಟಾರ್ನಿ ಜನರಲ್ ಅವರು ತನಿಖೆಗೆ ಆದೇಶಿಸಿದ ನಂತರ ಈ ಒಪ್ಪಂದ ವಿವಾದಕ್ಕೀಡಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News