×
Ad

ಅಂತರ್ ರಾಷ್ಟ್ರೀಯ ಫುಟ್ಬಾಲ್ ನಿಂದ ಜರ್ಮನಿಯ ಟೋನಿ ಕ್ರೂಸ್ ನಿವೃತ್ತಿ

Update: 2021-07-02 18:46 IST

photo: twitter/@goal

ಬರ್ಲಿನ್ : ಜರ್ಮನಿಯ ಮಿಡ್‌ಫೀಲ್ಡರ್ ಟೋನಿ ಕ್ರೂಸ್ ತಮ್ಮ ತಂಡವು ಯುರೋಪಿಯನ್ ಚಾಂಪಿಯನ್‌ಶಿಪ್‌ನಿಂದ ನಿರ್ಗಮಿಸಿದ ನಂತರ ಅಂತರರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 31 ವರ್ಷದ ಕ್ರೂಸ್  ಇನ್‌ಸ್ಟಾಗ್ರಾಮ್‌ನಲ್ಲಿ  ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

2014 ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಕ್ರೂಸ್ ತಮ್ಮ ದೇಶಕ್ಕಾಗಿ 106 ಪಂದ್ಯಗಳನ್ನು ಆಡಿದ್ದು, 17 ಗೋಲುಗಳನ್ನು ಗಳಿಸಿದ್ದಾರೆ.

ಮುಂದಿನ ವರ್ಷ ಖತರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ತಾನು  ಲಭ್ಯವಿರುವುದಿಲ್ಲ ಎಂಬುದು “ದೀರ್ಘಕಾಲದವರೆಗೆ” ಸ್ಪಷ್ಟವಾಗಿತ್ತು  ಎಂದು ಕ್ರೂಸ್ ಹೇಳಿದರು.

ರಿಯಲ್ ಮ್ಯಾಡ್ರಿಡ್‌ನೊಂದಿಗಿನ ತನ್ನ ಕ್ಲಬ್ ವೃತ್ತಿಜೀವನದತ್ತ ಗಮನಹರಿಸುವುದು ಹಾಗೂ  ಕುಟುಂಬದೊಂದಿಗೆ ಸಮಯ ಕಳೆಯುವುದು ಈಗ ನನ್ನ  ಆದ್ಯತೆಯಾಗಿದೆ ಎಂದು ಕ್ರೂಸ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News