ಅಮೆರಿಕದ ಸಂಸ್ಥೆಯೊಂದರ ನೆಟ್ವರ್ಕ್ ಮೇಲೆ ಸೈಬರ್ ದಾಳಿ: 200ಕ್ಕೂ ಹೆಚ್ಚು ಸಂಸ್ಥೆಗಳ ಮಾಹಿತಿಗೆ ಕನ್ನ ?

Update: 2021-07-03 15:03 GMT

ವಾಷಿಂಗ್ಟನ್, ಜು.3: ಅಮೆರಿಕದ ಕಸೆಯಾ ಸಂಸ್ಥೆಯ ಕಂಪ್ಯೂಟರ್ ನೆಟ್ವರ್ಕ್ ನಿರ್ವಹಣೆ ವ್ಯವಸ್ಥೆಯ ಮೇಲೆ ಶುಕ್ರವಾರ ಸೈಬರ್ ದಾಳಿ ನಡೆದಿದ್ದು ಸುಮಾರು 200 ಸಂಸ್ಥೆಗಳ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂದು ಮೂಲಗಳು ಹೇಳಿವೆ. ಕಸೆಯಾ ಸಂಸ್ಥೆ ರೂಪಿಸಿರುವ ನೆಟ್ವರ್ಕ್ ಮ್ಯಾನೇಜ್ಮೆಂಟ್ ಟೂಲ್ ಸೈಬರ್ ದಾಳಿಗೆ ಒಳಗಾಗಿದ್ದು ತಕ್ಷಣ ಸುಮಾರು 200ರಷ್ಟು ಸಂಸ್ಥೆಗಳ ಸರ್ವರ್ ಅನ್ನು ಸ್ಥಗಿತಗೊಳಿಸಲಾಗಿದೆ. ‌

ಸೈಬರ್ ದಾಳಿಯಿಂದ ಕೆಲವು ಸಂಸ್ಥೆಗಳ ರಹಸ್ಯಮಾಹಿತಿ ಕದ್ದಿರುವ ಸಾಧ್ಯತೆಯಿದೆ. ಎನ್ಕ್ರಿಪ್ಷನ್ ಪ್ರಕ್ರಿಯೆಯ ಮೂಲಕ ಕಂಪ್ಯೂಟರ್ನ ಡೇಟಾ ವ್ಯವಸ್ಥೆಯನ್ನು ಲಾಕ್ಮಾಡುವುದು ಮತ್ತು ಲಾಕ್ ತೆರೆಯಬೇಕಿದ್ದರೆ ಇಂತಿಷ್ಟು ಹಣ ಪಾವತಿಸಬೇಕು ಎಂದು ಷರತ್ತು ವಿಧಿಸುವುದು ಸೈಬರ್ ದಾಳಿಕೋರರ ಕಾರ್ಯತಂತ್ರವಾಗಿದೆ.

ಪ್ರಕರಣದ ಅಮೂಲಾಗ್ರ ಶೋಧನೆ ನಡೆಸಲಾಗುವುದು. ಆದರೆ ತಕ್ಷಣ ನಿಮ್ಮ ಕಂಪ್ಯೂಟರ್ ವ್ಯವಸ್ಥೆಯ ಸರ್ವರ್ ಅನ್ನು ಸ್ಥಗಿತಗೊಳಿಸಿ ಮತ್ತು ಮುಂದಿನ ಸೂಚನೆಯವರೆಗೆ ಇದನ್ನು ಪಾಲಿಸಿ ಎಂದು ಕಸೆಯಾ ಸಂಸ್ಥೆ ಹೇಳಿಕೆ ನೀಡಿದೆ. ಇದು ಅಮೆರಿಕದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ಞಾನ ಮತ್ತು ಭದ್ರತೆ ವ್ಯವಸ್ಥೆಗೆ ಸಂಬಂಧಿಸಿದ ಸಲಹೆ, ನೆರವು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News