ಚೀನಾ ಖಗೋಳಯಾನಿಗಳಿಂದ ಪ್ರಥಮ ಬಾಹ್ಯಾಕಾಶ ನಡಿಗೆ

Update: 2021-07-04 17:36 GMT

ಬೀಜಿಂಗ್ (ಚೀನಾ), ಜು. 4: ಚೀನಾದ ನೂತನ ಬಾಹ್ಯಾಕಾಶ ನಿಲ್ದಾಣ ಟಿಯಂಗಾಂಗ್‌ನಲ್ಲಿರುವ ಚೀನೀ ಖಗೋಳಯಾನಿಗಳು ರವಿವಾರ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದಾರೆ. ಇದು ಚೀನಾದ ಮೊದಲ ಬಾಹ್ಯಾಕಾಶ ನಡಿಗೆಯಾಗಿದೆ.

ಚೀನಾದ ಇಬ್ಬರು ಖಗೋಳಯಾನಿಗಳು ಭೂಮಿಯ ಕಕ್ಷೆಯಲ್ಲಿ ಬಾಹ್ಯಾಕಾಶ ನಿಲ್ದಾಣದ ಹೊರಗೆ ಏಳು ಗಂಟೆಗಳ ಕಾಲ ಕೆಲಸ ಮಾಡಿದರು. ಮೂವರು ಗಗನಯಾನಿಗಳು ಕಳೆದ ತಿಂಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಅಲ್ಲಿ ಅವರು ಮೂರು ತಿಂಗಳು ವಾಸಿಸಲಿದ್ದಾರೆ.

ರವಿವಾರ ಬೆಳಗ್ಗೆ ಅವರ ಪೈಕಿ ಇಬ್ಬರು ನಿಲ್ದಾಣದಿಂದ ಹೊರ ಹೋಗಿ ಏಳು ಗಂಟೆಗಳ ಕಾಲ ಕೆಲಸ ಮಾಡಿದರು ಎಂದು ಚೀನಾ ಸಿಬ್ಬಂದಿ ಸಹಿತ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

‘‘ತಮ್ಮ ಕೆಲಸ ಮುಗಿಸಿದ ಬಳಿಕ ಗಗನಯಾನಿಗಳಾದ ಲಿಯು ಬೊಮಿಂಗ್ ಮತ್ತು ಟಾಂಗ್ ಹೊಂಗ್ಬೊ ಬಾಹ್ಯಾಕಾಶ ನಿಲ್ದಾಣದ ಒಳಗೆ ಸೇರಿಕೊಂಡರು. ಅವರು ಹೊರಗಿನಿಂದ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣದ ಕೆಲಸದಲ್ಲಿ ತೊಡಗಿದರು. ಇದು ದೇಶದ ಪ್ರಥಮ ಯಶಸ್ವಿ ಬಾಹ್ಯಾಕಾಶ ನಡಿಗೆಯಾಗಿದೆ’’ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News