ಹೈಟಿ ಅಧ್ಯಕ್ಷರ ಬರ್ಬರ ಹತ್ಯೆ, ಪತ್ನಿ ಗಂಭೀರ: ಮಧ್ಯಂತರ ಅಧ್ಯಕ್ಷರ ಘೋಷಣೆ

Update: 2021-07-07 14:33 GMT
photo: twitter/@LaPagina

ಪೋರ್ಟ್ ಆ- ಪ್ರಿನ್ಸ್, ಜು.7: ಹೈಟಿಯ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರ ಮನೆಗೆ ಮಂಗಳವಾರ ತಡರಾತ್ರಿ ನುಗ್ಗಿದ ಗುರುತಿಸಲಾಗದ ದುಷ್ಕರ್ಮಿಗಳು ಅಧ್ಯಕ್ಷರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಅವರ ಪತ್ನಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಧ್ಯಂತರ ಅಧ್ಯಕ್ಷ ಕ್ಲಾಡ್ ಜೋಸೆಫ್ ಘೋಷಿಸಿದ್ದಾರೆ. 

ಅಮೆರಿಕಾದಲ್ಲೇ ಅತ್ಯಂತ ಬಡದೇಶವಾಗಿರುವ ಹೈಟಿಯಲ್ಲಿ 2018ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿತ್ತು. ಆದರೆ ಅಧ್ಯಕ್ಷ ಮೊಯಿಸ್ ಅಧಿಕಾರಾವಧಿ ಮುಕ್ತಾಯಗೊಳ್ಳುವ ಅವಧಿ ಬಗ್ಗೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ, ನ್ಯಾಯಾಲಯದ ಆದೇಶದಂತೆ ಮೊಯಿಸ್ ಅವರೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿದಿದ್ದರು. 

ದೇಶದ ಭದ್ರತಾ ಪರಿಸ್ಥಿತಿ ಹೈಟಿಯ ಪೊಲೀಸರು ಹಾಗೂ ಸಶಸ್ತ್ರ ಪಡೆಗಳ ನಿಯಂತ್ರಣದಲ್ಲಿದೆ. ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ವ್ಯವಸ್ಥೆ ಗೆಲ್ಲುತ್ತದೆ . ತಾನೀಗ ಅಧಿಕಾರದ ನಿಯಂತ್ರಣ ಹೊಂದಿದ್ದೇನೆ . ದೇಶದ ಸುರಕ್ಷತೆಯನ್ನು ಖಾತರಿಪಡಿಸಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಜೋಸೆಫ್ ಘೋಷಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News