×
Ad

ಅದ್ಭುತ ಕ್ಯಾಚ್ ಪಡೆದು ಆಸ್ಟ್ರೇಲಿಯ ನಾಯಕ ಫಿಂಚ್ ಗೆ ಪೆವಿಲಿಯನ್ ಹಾದಿ ತೋರಿಸಿದ ವಿಂಡೀಸ್ ನ ಫ್ಯಾಬಿಯನ್

Update: 2021-07-17 17:22 IST

ಸೈಂಟ್ ಲೂಸಿಯಾ: ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರದ ನಡೆದ ಐದನೇ ಹಾಗೂ ಅಂತಿಮ ಟ್ವೆಂಟಿ- 20  ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಫ್ಯಾಬಿಯನ್ ಅಲೆನ್ ಒಂದೇ ಕೈಯಲ್ಲಿ ಡೈವಿಂಗ್ ಕ್ಯಾಚ್ ಪಡೆದು  ಕ್ರಿಕೆಟ್ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದರು.

ಸ್ಪಿನ್ನರ್ ಹೇಡನ್ ವಾಲ್ಷ್ ಎಸೆದ 10 ನೇ ಓವರ್‌ನ ಎರಡನೇ ಎಸೆತದಲ್ಲಿ, ಆಸ್ಟ್ರೇಲಿಯದ ನಾಯಕ ಆ್ಯರೊನ್ ಫಿಂಚ್ ಲೋ ಪುಲ್ ಟಾಸ್ ಆಡಲು ಹೋಗಿ ಚೆಂಡನ್ನು ಲಾಂಗ್-ಆನ್ ಬೌಂಡರಿ ಕಡೆಗೆ ಹೊಡೆದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲೆನ್ ಒಂದೇ ಕೈಯಿಂದ ಕ್ಯಾಚ್ ಪಡೆದರು. ಅಪಾಯಕಾರಿ ಆಟಗಾರನಾಗಿ ಕಂಡು ಬಂದ ಫಿಂಚ್ ಗೆ ಪೆವಿಲಿಯನ್ ಹಾದಿ ತೋರಿಸಿದರು. ಫಿಂಚ್ 23 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು.

ಫ್ಯಾಬಿಯನ್ ಅಲೆನ್ ತನ್ನ ಗಮನಾರ್ಹ ಕ್ಯಾಚ್‌ನ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಇದು ಹಕ್ಕಿಯಲ್ಲ, ವಿಮಾನವಲ್ಲ, ಸೂಪರ್‌ಮ್ಯಾನ್ ಅಲ್ಲ, ಇದು ನಿಮ್ಮ ಹುಡುಗ ಫ್ಯಾಬಿಯನ್’ ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News