ಪಾಕಿಸ್ತಾನದಲ್ಲಿ ಅಫ್ಘಾನ್ ರಾಯಭಾರಿ ಪುತ್ರಿಯ ಅಪಹರಣ, ಬಿಡುಗಡೆ

Update: 2021-07-17 17:54 GMT
photo : twitter.com/NajibAlikhil

ಕಾಬೂಲ್, ಜು. 17: ಪಾಕಿಸ್ತಾನದಲ್ಲಿರುವ ತನ್ನ ರಾಯಭಾರಿಯ ಪುತ್ರಿಯನ್ನು ಅನಾಮಿಕ ದುಷ್ಕರ್ಮಿಗಳು ಇಸ್ಲಮಾಬಾದ್ನಿಂದ ಶನಿವಾರ ಅಪಹರಿಸಿದ್ದಾರೆ ಹಾಗೂ ದೌರ್ಜನ್ಯ ಎಸಗಿದ್ದಾರೆ ಎಂದು ಅಘ್ಘಾನಿಸ್ತಾನ ಸರಕಾರ ಶನಿವಾರ ಹೇಳಿದೆ. 

ಅಫ್ಘಾನ್ ರಾಯಭಾರಿ ನಝಿಬುಲ್ಲಾಹ್ ಅಲಿಖಿಲ್ ಅವರ ಪುತ್ರಿ ಸಿಲ್ಸಿಲಾ ಅಲಿಖಿಲ್ ಅವರು ತನ್ನ ನಿವಾಸಕ್ಕೆ ತೆರಳುತ್ತಿರುವಾಗ ದುಷ್ಕರ್ಮಿಗಳು ಅಪಹರಿಸಿ ಹಲವು ಗಂಟೆಗಳ ಕಾಲ ವಶದಲ್ಲಿ ಇರಿಸಿದ್ದಾರೆ ಹಾಗೂ ಹಿಂಸೆ ನೀಡಿದ್ದಾರೆ ಎಂದು ಅಪ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. 

ಅಪಹರಣಕಾರರಿಂದ ಬಿಡುಗಡೆಯಾದ ಬಳಿಕ ಸಿಲ್ಸಿಲಾ ಅಲಿಖಿಲ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಅಫ್ಘಾನಿಸ್ತಾನದ ರಾಯಬಾರಿಗಳಿಗೆ ಇತರ ದೇಶಗಳಲ್ಲಿ ರಕ್ಷಣೆ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News