×
Ad

ಒಲಿಂಪಿಕ್ಸ್ : ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಸವಾಲು ಅಂತ್ಯ

Update: 2021-07-24 10:45 IST

ಟೋಕಿಯೊ: ಒಲಿಂಪಿಕ್ ಗೇಮ್ಸ್ ನ ಟೇಬಲ್ ಟೆನಿಸ್ ನ  ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಮಣಿಕಾ ಬಾತ್ರಾ ಹಾಗೂ ಶರತ್ ಕಮಲ್ ಅವರ ಅಭಿಯಾನ ಅಂತ್ಯವಾಗಿದೆ.

ಪದಕ ಗೆಲ್ಲಬಲ್ಲ  ಜೋಡಿ  ಒಂದೆಂದು ಪರಿಗಣಿಸಲ್ಪಟ್ಟಿದ್ದ ಮಣಿಕಾ ಹಾಗೂ ಶರತ್ ಕಮಲ್ ಕಠಿಣ ಎದುರಾಳಿಯನ್ನು ಎದುರಿಸಿದ್ದರು.  16 ನೇ ಸುತ್ತಿನ ಪಂದ್ಯದಲ್ಲಿ ಮಣಿಕಾ-ಶರತ್ ಕಮಲ್  ಅವರು   ಚೈನೀಸ್ ತೈಪೆಯ ವಿಶ್ವ ನಂ .1 ಜೋಡಿಗಳಾದ ಲಿನ್ ಯುನ್ ಜು ಹಾಗೂ  ಚೀನೀ ತೈಪೆಯ ಚೆಂಗ್ ಐ ಚಿಂಗ್ ಎದುರು 0-4 (8-11, 6-11, 5-11, 4-11)  ನೇರ ಗೇಮ್ ಗಳ ಅಂತರದಿಂದ ಸೋತಿದ್ದಾರೆ.

ಮಣಿಕಾ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಣಸಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News