ಒಲಿಂಪಿಕ್ಸ್ ಹಾಕಿ: ಭಾರತದ ಮಹಿಳಾ ತಂಡಕ್ಕೆ ನೆದರ್ ಲ್ಯಾಂಡ್ ವಿರುದ್ಧ ಸೋಲು

Update: 2021-07-24 14:15 GMT

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಶನಿವಾರ ನಡೆದ ಎ ಗುಂಪಿನ ಮೊದಲ  ಪಂದ್ಯದಲ್ಲಿ ಭಾರತದ ಮಹಿಳಾ ಹಾಕಿ ತಂಡವು ಮೊದಲೆರಡು ಕ್ವಾರ್ಟರ್ ನಲ್ಲಿ ಹೋರಾಟ ನೀಡಿದರೂ ವಿಶ್ವದ ನಂ.1 ತಂಡ ನೆದರ್ ಲ್ಯಾಂಡ್ ವಿರುದ್ಧ 1-5 ಅಂತರದಿಂದ ಸೋಲನುಭವಿಸಿತು.

ಫೆಲಿಸ್ ಅಲ್ಬರ್ಸ್ ಆರನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಮೊದಲ 2 ಕ್ವಾರ್ಟರ್ ನಲ್ಲಿ ಒಂದಷ್ಟು ಹೋರಾಟ ನೀಡಿದ ಭಾರತ ತಂಡ ಮೊದಲಾರ್ಧದ  ಅಂತ್ಯಕ್ಕೆ 1-1ರಿಂದ ಸಮಬಲ ಸಾಧಿಸಿತು.

ಮಾರ್ಗೊಟ್ ವಾನ್ ಜಿಫೆನ್(33ನೇ ನಿ.)ನೆದರ್ ಲ್ಯಾಂಡ್ ಗೆ ಮುನ್ನಡೆ ಒದಗಿಸಿದರು. ಅಲ್ಬರ್ಸ್(43ನೇ ನಿ.)ಹಾಗೂ ಫೆಡರೆಕ್ ಮಾಟ್ಲಾ(45ನೇ ನಿ.) ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿದರು. ಜಾಕ್ವೆಲಿನ್ ವಾನ್ 52ನೇನಿಮಿಷದಲ್ಲಿ ಗೋಲು ಗಳಿಸಿ ನೆದರ್ ಲ್ಯಾಂಡ್ 5-1 ಅಂತರದಿಂದ ಜಯ ಸಾಧಿಸಲು ನೆರವಾದರು.

ಭಾರತವು ಜುಲೈ 26ರಂದು ಎ ಗುಂಪಿನ ಮುಂದಿನ ಪಂದ್ಯದಲ್ಲಿ ಜರ್ಮನಿಯ ಸವಾಲು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News