ಅಪಘಾನ್ ವಲಸಿಗರಿಗೆ 100 ಮಿಲಿಯನ್ ಡಾಲರ್ ನೆರವಿಗೆ ಅಮೆರಿಕ ಅಧ್ಯಕ್ಷರ ಅನುಮೋದನೆ

Update: 2021-07-24 17:36 GMT

ವಾಂಗ್ಟನ್, ಜು.24: ಅಪಘಾನಿಸ್ತಾನದಲ್ಲಿ ವಲಸೆ ತುರ್ತುಪರಿಸ್ಥಿತಿಗೆ ಸಂಬಂಧಿಸಿದ ಪರಿಸ್ಥಿತಿಯನ್ನು ಪರಿಹರಿಸಲು 100 ಮಿಲಿಯನ್ ಡಾಲರ್ವರೆಗಿನ ನಿಧಿ ಬಳಕೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಅನುಮೋದನೆ ನೀಡಿದ್ದಾರೆ ಎಂದು ಪೆಂಟಗಾನ್ ಮೂಲಗಳು ಹೇಳಿವೆ. 

ಎಮರ್ಜೆನ್ಸಿ ರೆಫ್ಯುಜೀ ಆ್ಯಂಡ್ ಮೈಗ್ರೇಷನ್ ಅಸಿಸ್ಟೆನ್ಸ್ ಫಂಡ್(ನಿರಾಶ್ರಿತರು ಮತ್ತು ವಲಸಿಗರ ತುರ್ತು ನೆರವು ನಿಧಿ)ನಿಂದ ಈ ಮೊತ್ತ ಪಡೆಯಲಾಗುವುದು. ಅಪಘಾನಿಸ್ತಾನದಲ್ಲಿನ ಪರಿಸ್ಥಿತಿಯಿದ ಉದ್ಭಸಿರುವ ನಿರಾಶ್ರಿತರ ಮತ್ತು ವಲಸಿಗರ ಅನಿರೀಕ್ಷಿತ, ತುರ್ತು ಸಮಸ್ಯೆಗೆ, ಸಂಘರ್ಷದ ಸಂತ್ರಸ್ತರು ಮತ್ತಿತರ ವ್ಯಕ್ತಿಗಳಿಗೆ ಈ ನಿಧಿುಂದ ನೆರವು ಒದಗಿಸಲು ಅವಕಾಶದೆ ಎಂದು ಹೇಳಿಕೆ ತಿಳಿಸಿದೆ.

 ಅಪಘಾನಿಸ್ತಾನದಲ್ಲಿ ಅಮೆರಿಕದ ಶಾಂತಿಪಾಲನಾ ಪಡೆ ಇದ್ದ ಸಂದರ್ಭ ದುಬಾಗಳಾಗಿ ಕಾರ್ಯನಿರ್ವಸಿ ಅಮೆರಿಕಕ್ಕೆ ನೆರವು ನೀಡಿದ್ದ, ಮತ್ತು ಈಗ ತಾಲಿಬಾನ್ಗಳಿಂದ ಪ್ರತೀಕಾರದ ದಾಳಿಯ ಭೀತಿಯಿಂದ ಸ್ಥಳಾಂತರಕ್ಕೆ ಇಚ್ಛಿಸುವ ಸುಮಾರು 20,000 ಅಪಘಾನ್ ಪ್ರಜೆಗಳು ಶೇಷ ವಲಸಿಗ ವೀಸಾ(ಎಸ್ಐ)ಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭವೂ ಈ ನಿಧಿಯಿಂದ ನೆರವು ಒದಗಿಸಲು ಅವಕಾಶದೆ. ದ್ವಿಪಕ್ಷೀಯ ಅಥವಾ ಬಹುರ್ಟ್ರೋಯ ವ್ಯವಹಾರದ ಮೂಲಕ ಅಥವಾ ಅಂತರ್ಟ್ರೋಯ ಸಂಘಟನೆಗಳು, ಸರಕಾರೇತರ ಸಂಘಟನೆಗಳು, ಅಮೆರಿಕದ ಸಂಸ್ಥೆಗಳ ಮೂಲಕ ಈ ನಿಧಿಯನ್ನು ಹಂಚಬಹುದು ಎಂದು ತಿಳಿಸಲಾಗಿದೆ. ಅಪಘಾನಿಸ್ತಾನದ 39 ಮಿಲಿಯನ್ ಜನಸಂಖ್ಯೆಯ ಅರ್ಧಾಂಶದಷ್ಟು ಜನರಿಗೆ ನೆರನ ಅಗತ್ಯರುವುದರಿಂದ ಅಂತರ್ಟ್ರೋಯ ಸಮುದಾಯ ಈ ದೇಶಕ್ಕೆ ಆರ್ಥಿಕ ನೆರವು ಮುಂದುವರಿಸಬೇಕು ಎಂದು ಅಮೆರಿಕ ಇತ್ತೀಚೆಗೆ ಕರೆ ನೀಡಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News