ಕೊವ್ಯಾಕ್ಸಿನ್ ವೈದ್ಯಕೀಯ ಪರೀಕ್ಷಾ ಪ್ರಯೋಗ ರದ್ದುಗೊಳಿಸಿದ ಬ್ರೆಝಿಲ್

Update: 2021-07-24 17:41 GMT

ಬ್ರಸೀಲಿಯಾ, ಜು.24: ಬ್ರೆಝಿಲ್ನಲ್ಲಿ ಭಾರತ್ ಬಯೊಟೆಕ್ ನ ಕೋಡ್ ಲಸಿಕೆ ಕೊವ್ಯಾಕ್ಸಿನ್ನ ವೈದ್ಯಕೀಯ ಪರೀಕ್ಷಾ ಪ್ರಯೋಗವನ್ನು ರದ್ದುಗೊಳಿಸಿರುವುದಾಗಿ ಅಲ್ಲಿನ ಔಷಧ ನಿಯಂತ್ರಕ ಪ್ರಾಧಿಕಾರ ಹೇಳಿದೆ. ಭಾರತ್ ಬಯೊಟೆಕ್ ಸಂಸ್ಥೆ, ಬ್ರೆಝಿಲ್ನಲ್ಲಿರುವ ತನ್ನ ಪಾಲುದಾರ ಸಂಸ್ಥೆಯೊಂದಿಗಿನ ಗುತ್ತಿಗೆಯನ್ನು ಅಂತ್ಯಗೊಳಿಸಿರುವ ನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. 

ಬ್ರೆಝಿಲ್ನ ಮಾರುಕಟ್ಟೆಗೆ ತನ್ನ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಗೆ ಅಲ್ಲಿನ ಪ್ರೆಸಿಸಾ ಮೆಡಿಕಮೆಂಟೋಸ್ ಆ್ಯಂಡ್ ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸಿರುವುದಾಗಿ ಭಾರತ್ ಬಯೊಟೆಕ್ ಶುಕ್ರವಾರ ಹೇಳಿಕೆ ನೀಡಿತ್ತು. ಬ್ರೆಝಿಲ್ ಗೆ 20 ಮಿಲಿಯನ್ ಡೋಸ್ ಲಸಿಕೆ ಪೂರೈಸುವ ಒಪ್ಪಂದದ ಕುರಿತ ವಾದದ ಬಗ್ಗೆ ಬ್ರೆಝಿಲ್ ಸರಕಾರ ತನಿಖೆಗೆ ಆದೇಶಿಸಿದ ನ್ನೆಲೆಯಲ್ಲಿ ಒಪ್ಪಂದ ರದ್ದಾಗಿದೆ ಎಂದು ಭಾರತ್ ಬಯೊಟೆಕ್ ಹೇಳಿತ್ತು. 

ಬ್ರೆಝಿಲ್ನಲ್ಲಿ ಭಾರತ್ ಬಯೊಟೆಕ್ನ ಪಾಲುದಾರ ಸಂಸ್ಥೆಯಾಗಿರುವ ಪ್ರೆಸಿಸಾ ಮೆಡಿಕಮೆಂಟೋಸ್ ಆ ದೇಶದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಹಂಚಿಕೆ, 3ನೇ ಹಂತದ ವೈದ್ಯಕೀಯ ಪರೀಕ್ಷಾ ಪ್ರಯೋಗ ನಡೆಸುವುದು ಇತ್ಯಾದಿ ಪ್ರಕ್ರಿಯೆ ನಡೆಸುವ ಬಗ್ಗೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಭಾರತ್ ಬಯೊಟೆಕ್ ನ ಹೇಳಿಕೆಯ ಹಿನ್ನೆಲೆಯಲ್ಲಿ ಪರೀಕ್ಷಾ ಪ್ರಯೋಗ ರದ್ದುಗೊಳಿಸುವಂತೆ ಪ್ರೆಸಿಸಾ ಮೆಡಿಕಮೆಂಟೋಸ್ ಬ್ರೆಝಿಲ್ನ ಔಷದ ನಿಯಂತ್ರಕ ಪ್ರಾಧಿಕಾರ ಸೂಚಿಸಿದೆ ಎಂದು ವರದಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News