ಒಲಿಂಪಿಕ್ಸ್ ಬಾಕ್ಸಿಂಗ್: ಮೇರಿಕೋಮ್ ಗೆಲುವಿನ ಆರಂಭ, ಅಂತಿಮ-16ರ ಸುತ್ತಿಗೆ ತೇರ್ಗಡೆ

Update: 2021-07-25 08:35 GMT

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಬಾಕ್ಸಿಂಗ್ ನ ಫ್ಲೈವೇಟ್ (48-51 ಕೆಜಿ)ವಿಭಾಗದ  32 ನೇ ಸುತ್ತಿನಲ್ಲಿ ಭಾರತದ ಬಾಕ್ಸಿಂಗ್ ದಂತಕತೆ ಮೇರಿಕೋಮ್  ಡೊಮಿನಿಕನ್ ಗಣರಾಜ್ಯದ ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾ ಅವರನ್ನು 4-1 ಅಂತರದಿಂದ ಸೋಲಿಸಿ ಗೆಲುವಿನ ಆರಂಭ ಪಡೆದರು. ಈ ಗೆಲುವಿನ ಮೂಲಕ ಮೇರಿಕೋಮ್ ಅವರು ಅಂತಿಮ-16ರ ಸುತ್ತಿಗೆ ತಲುಪಿದರು.

ಮೇರಿಕೋಮ್ ಅವರು ಮೊದಲೆರಡು ಸುತ್ತುಗಳನ್ನು ಸುಲಭವಾಗಿ ಗೆದ್ದುಕೊಂಡರು.

38ರ ಹರೆಯದ ಮಣಿಪುರದ ಬಾಕ್ಸರ್ ಮೇರಿಕೋಮ್ ಜುಲೈ 29ರಂದು ನಡೆಯಲಿರುವ ಪ್ರಿ-ಕ್ವಾರ್ಟರ್  ಫೈನಲ್ ನಲ್ಲಿ 3ನೇ ಶ್ರೇಯಾಂಕದ ಕೊಲಂಬಿಯಾದ ಬಾಕ್ಸರ್ ವಲೆನ್ಸಿಯಾ ವಿಕ್ಟೋರಿಯಾ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News