ಒಲಿಂಪಿಕ್ಸ್: ಆಸ್ಟ್ರೇಲಿಯ ವಿರುದ್ಧ ಭಾರತದ ಪುರುಷರ ಹಾಕಿ ತಂಡಕ್ಕೆ ಹೀನಾಯ ಸೋಲು

Update: 2021-07-25 14:13 GMT
Photo: twitter/TheHockeyIndia

ಟೋಕಿಯೊ: ಭಾರತೀಯ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ ನಲ್ಲಿ ರವಿವಾರ ನಡೆದ ಎ ಗುಂಪಿನ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ದ 1-7 ಗೋಲುಗಳ ಅಂತರದಿಂದ ಹೀನಾಯ ಸೋಲನುಭವಿಸಿದೆ.

ಪಂದ್ಯದುದ್ದಕ್ಕೂ ಪ್ರಾಬಲ್ಯಸಾಧಿಸಿರುವ ಆಸ್ಟ್ರೇಲಿಯದ ಪರ ಡೇನಿಯಲ್ ಬೀಲ್ (10 ನೇ ನಿಮಿಷ), ಜೆರೆಮಿ ಹೇವರ್ಡ್ (21 ನೇ), ಆಂಡ್ರ್ಯೂ ಫ್ಲಿನ್ ಒಗಿಲ್ವಿ (23 ನೇ), ಜೋಶುವಾ ಬೆಲ್ಟ್ಜ್ (26 ನೇ), ಬ್ಲೇಕ್ ಗವರ್ಸ್ (40 ನೇ, 42 ನೇ) ಹಾಗೂ  ಟಿಮ್ ಬ್ರಾಂಡ್ (51 ನೇ)ಗೋಲು ಗಳಿಸಿದರು. ಈ ಮೂಲಕ ಗೇಮ್ಸ್ ನಲ್ಲಿ ಸತತ 2ನೇ ಗೆಲುವು ದಾಖಲಿಸಿತು.

ಭಾರತದ ಪರ ದಿಲ್ ಪ್ರೀತ್ ಸಿಂಗ್ 34ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

ಭಾರತವು ಶನಿವಾರ ನಡೆದ ಮೊದಲ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಅನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿತ್ತು. ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡವು ಮಂಗಳವಾರ ನಡೆಯುವ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News