×
Ad

ಸೆ.19ರಂದು ದುಬೈನಲ್ಲಿ ಐಪಿಎಲ್ ಪುನರಾರಂಭ: ಮೊದಲ ಪಂದ್ಯದಲ್ಲಿ ಚೆನ್ನೈ-ಮುಂಬೈ ಮುಖಾಮುಖಿ

Update: 2021-07-25 21:13 IST

ಹೊಸದಿಲ್ಲಿ: ಯುಎಇಯಲ್ಲಿ ಪುನರಾರಂಭವಾಗಲಿರುವ  ಐಪಿಎಲ್ ಟೂರ್ನಿಯ ಮೊದಲ ಪಂದ್ಯವು ಸೆಪ್ಟೆಂಬರ್ 19 ರಂದು ನಡೆಯಲಿದ್ದು,  ದುಬೈನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಿಸಲಿದೆ ಎಂದು ಬಿಸಿಸಿಐ ರವಿವಾರ ತಿಳಿಸಿದೆ.

ಟೂರ್ನಿಯಲ್ಲಿ ರಚಿಸಲಾದ ಬಯೋಬಬಲ್ ನಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟ ಕಾರಣ ಮೇ ನಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು.

ಮೊದಲೇ ವರದಿಯಾದಂತೆ ಪಂದ್ಯಾವಳಿ ಸೆಪ್ಟೆಂಬರ್ 19 ರಂದು ಪುನರಾರಂಭಗೊಳ್ಳುತ್ತಿದೆ ಹಾಗೂ  ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ನಡೆಯಲಿದೆ.

"ಹೌದು, ನಾವು ಇದೀಗ ಬಿಸಿಸಿಐನಿಂದ ಮೇಲ್ ಸ್ವೀಕರಿಸಿದ್ದೇವೆ. ಚೆನ್ನೈ ತಂಡ ಸೆಪ್ಟೆಂಬರ್ 19 ರಂದು ಮುಂಬೈ ಎದುರು  ಆಡಲಿದೆ. ಮೊದಲ ಕ್ವಾಲಿಫೈಯರ್ ಅಕ್ಟೋಬರ್ 10 ರಂದು ನಡೆಯಲಿದ್ದು, ಅಕ್ಟೋಬರ್ 11 ರಂದು ಎಲಿಮಿನೇಟರ್ ಮತ್ತು ಅಕ್ಟೋಬರ್ 13 ರಂದು ಎರಡನೇ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದೆ.

27 ದಿನಗಳ ಅವಧಿಯಲ್ಲಿ 31 ಪಂದ್ಯಗಳು ನಡೆಯಲಿದ್ದು, ಅದರಲ್ಲಿ 7 ಡಬಲ್ ಹೆಡರ್(ದಿನಕ್ಕೆ 2 ಪಂದ್ಯಗಳು)ಇರಲಿವೆ. ಸೆ.20ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಅಬುಧಾಬಿಯಲ್ಲಿ ಸೆಣಸಾಡಲಿವೆ. ಅಕ್ಟೋಬರ್ 8ರಂದು ಕೊನೆಯ ಲೀಗ್ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News