'ನೀವು ಯಾವಾಗಲೂ ಚಾಂಪಿಯನ್' : ಒಲಿಂಪಿಕ್ಸ್ ನಲ್ಲಿ ಸೋತು ನಿರ್ಗಮಿಸಿದ ಮೇರಿ ಕೋಮ್ ಗೆ ಟ್ವಿಟರಿಗರ ಬೆಂಬಲ

Update: 2021-07-29 15:36 GMT
photo : PTI

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ ನ ಪ್ರಿ-ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಗುರುವಾರ ಕೇವಲ 1 ಅಂಕದಿಂದ ಸೋತು ನಿರ್ಗಮಿಸಿರುವ ಬಾಕ್ಸಿಂಗ್ ದಂತಕತೆ ಮೇರಿ ಕೋಮ್‌ಗೆ ಮಾಜಿ ಕ್ರೀಡಾ ಸಚಿವ ಹಾಗೂ ಹಾಲಿ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರೋತ್ಸಾಹದಾಯಕ ಸಂದೇಶಗಳ ಸರಣಿಯನ್ನು ಮುನ್ನಡೆಸಿದರು.

ಟೋಕಿಯೊ ಒಲಿಂಪಿಕ್ಸ್ ಗೆ ಮೊದಲು ಇದು ನನ್ನ ಕೊನೆಯ ಒಲಿಂಪಿಕ್ಸ್ ಆಗಿದೆ ಎಂದು ಆರು ಬಾರಿ ವಿಶ್ವ ಚಾಂಪಿಯನ್ ಘೋಷಿಸಿದ್ದರು.

ಮಹಿಳಾ ಫ್ಲೈ ವೇಟ್ (48-51 ಕೆಜಿ) ವಿಭಾಗದ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಮೇರಿ ಕೋಮ್ ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ವಿರುದ್ಧ 2-3 ಅಂತರದಲ್ಲಿ ಸೋತರು.

 "ಪ್ರೀತಿಯ ಮೇರಿ ಕೋಮ್, ನೀವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೇವಲ ಒಂದು ಪಾಯಿಂಟ್‌ನಿಂದ ಸೋತಿದ್ದೀರಿ ಆದರೆ ನನಗೆ ನೀವು ಯಾವಾಗಲೂ ಚಾಂಪಿಯನ್ ಆಗಿದ್ದೀರಿ! ವಿಶ್ವದ ಯಾವುದೇ ಮಹಿಳಾ ಬಾಕ್ಸರ್ ಸಾಧಿಸದಿದ್ದನ್ನು ನೀವು ಸಾಧಿಸಿದ್ದೀರಿ. ನೀವು ದಂತಕತೆ. ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಬಾಕ್ಸಿಂಗ್ ಮತ್ತು ಒಲಿಂಪಿಕ್ಸ್ ನಿಮ್ಮಿಂದ ವಂಚಿತವಾಗುತ್ತಿದೆ’’ ಎಂದು ರಿಜಿಜು ಟ್ವೀಟ್ ನಲ್ಲಿ ಬರೆದಿದ್ದಾರೆ.

ನಾವು ವೇಗವಾಗಿ, ಬಲಿಷ್ಠವಾಗಿ ಒಟ್ಟಿಗೆ ವಾಪಸಾಗುತ್ತೇವೆ "ಎಂದು ಒಲಿಂಪಿಕ್ಸ್ ಗಾಗಿ ಭಾರತೀಯ ತಂಡದ ಅಧಿಕೃತ ಹ್ಯಾಂಡಲ್ ಟೀಮ್ ಇಂಡಿಯಾ ಟ್ವೀಟ್ ಮಾಡಿದೆ.

ಉದ್ಯಮಿ ಹರ್ಷ ಗೊಯೆಂಕಾ,ಮಾಜಿ ಕ್ರಿಕೆಟಿಗರಾದ ವಸೀಂ ಜಾಫರ್, ಯೂಸುಫ್ ಪಠಾಣ್ ಹಾಗೂ ಆರ್.ಪಿ.ಸಿಂಗ್ ಅವರು ಮೇರಿ ಕೋಮ್ ಅವರನ್ನು ಪ್ರಶಂಶಿಸಿದ್ದಾರೆ.

ಐಪಿಎಲ್ ತಂಡಗಳಾಗಿರುವ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಣಿಪುರದ ಬಾಕ್ಸರ್ ಗೆ ಶುಭಾಶಯ ಕೋರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News