ಪ್ರಿ-ಕ್ವಾರ್ಟರ್ ಫೈನಲ್ ತೀರ್ಪು: ಐಒಸಿ ವಿರುದ್ದ ಮೇರಿ ಕೋಮ್ ಆಕ್ರೋಶ

Update: 2021-07-29 15:49 GMT

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಮಹಿಳೆಯರ 51 ಕೆಜಿ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ತಮ್ಮ ವಿರುದ್ಧ ನೀಡಲಾದ ತೀರ್ಪಿನ ಬಗ್ಗೆ ಮೇರಿ ಕೋಮ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಅಂತರ ರಾಷ್ಟ್ರೀಯ ಒಲಿಂಪಿಕ್ಸ್ ಕೌನ್ಸಿಲ್(ಐಒಸಿ)ಬಾಕ್ಸಿಂಗ್ ಕಾರ್ಯಪಡೆಯ ವಿರುದ್ಧ ಹರಿಹಾಯ್ದಿರುವ ಅವರು ಅಂಪೈರಿಂಗ್ ಕಳಪೆಯಾಗಿತ್ತು ಎಂದು ದೂರಿದ್ದಾರೆ.

ಪಿಟಿಐಗೆ ಫೋನ್ ಮೂಲಕ ಸಂದರ್ಶನ ನೀಡಿದ ಅವರು ನಾನು ಕೂಡ ಈ ಕಾರ್ಯಪಡೆಯ ಸದಸ್ಯೆ. ಉತ್ತಮವಾದ ಆಯೋಜನೆಗೆ ಬೇಕಾದ ಎಲ್ಲ ಸಲಹೆ, ಸಹಕಾರವನ್ನು ನೀಡುತ್ತಾ ಬಂದಿರುವೆ. ಆದರೆ ನನ್ನೊಂದಿಗೆ ಈ ರೀತಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಪೈರಿಂಗ್ ನಲ್ಲಿ ಪಾರದರ್ಶಕತೆ ಇಲ್ಲ. ಇದು ಕೆಟ್ಟ ಸಂಪ್ರದಾಯ. ಇದನ್ನು ಪ್ರತಿಭಟಿಸಲು ಕೂಡ ಅವಕಾಶವಿಲ್ಲ. ಈ ಧೋರಣೆ ಕೆಟ್ಟದ್ದಾಗಿದೆ ಎಂದು ಮೇರಿ ಕೋಮ್ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News