ಡೆಲ್ಟಾ ಪ್ರಭೇದದಿಂದಾಗಿ ಮಧ್ಯಪ್ರಾಚ್ಯದಲ್ಲಿ 4ನೇ ಅಲೆ: ವಿಶ್ವ ಆರೋಗ್ಯ ಸಂಸ್ಥೆ

Update: 2021-07-30 15:33 GMT

ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 30: ಕೊರೋನ ವೈರಸ್ನ ಡೆಲ್ಟಾ ಪ್ರಭೇದವು ಮಧ್ಯಪ್ರಾಚ್ಯದಲ್ಲಿ ನಾಲ್ಕನೇ ಅಲೆಯನ್ನು ಹುಟ್ಟು ಹಾಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಗುರುವಾರ ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಲಸಿಕೀಕರಣವು ಕಡಿಮೆ ಪ್ರಮಾಣದಲ್ಲಿದೆ.


ಮೊರೊಕ್ಕೊದಿಂದ ಪಾಕಿಸ್ತಾನದವರೆಗೆ ಮಧ್ಯಪ್ರಾಚ್ಯದ ತನ್ನ ವ್ಯಾಪ್ತಿಯಲ್ಲಿರುವ ಪ್ರದೇಶದ 22 ದೇಶಗಳು ಮತ್ತು ಭೂಭಾಗಗಳ ಪೈಕಿ 15ರಲ್ಲಿ ವೈರಸ್ನ ಈ ವೇಗವಾಗಿ ಹರಡವು ಪ್ರಭೇದವು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
 
ಡೆಲ್ಟಾ ಪ್ರಭೇದದ ಹರಡುವಿಕೆಯಿಂದಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಒಳಪಟ್ಟ ಪೂರ್ವ ಮೆಡಿಟರೇನಿಯನ್ ವಲಯದಲ್ಲಿರುವ ದೇಶಗಳಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News