ಕುದುರೆ ಸವಾರಿ ಸ್ಪರ್ಧೆ ಫೈನಲ್: ಫವಾದ್ ಮಿರ್ಝಾಗೆ 23ನೇ ಸ್ಥಾನ

Update: 2021-08-02 13:18 GMT
photo : twitter/@sportstarweb

ಟೋಕಿಯೊ: ಭಾರತದ ಈಕ್ವೆಸ್ಟ್ರಿಯನ್ ಫವಾದ್ ಮಿರ್ಝಾ ಜಂಪಿಂಗ್ ವೈಯಕ್ತಿಕ ಫೈನಲ್‌ನಲ್ಲಿ 23 ನೇ ಸ್ಥಾನ ಪಡೆದರು.

ವೈಯಕ್ತಿಕ 47.20 ಪೆನಾಲ್ಟಿಪಾಯಿಂಟ್ಸ್ ಗಳಿಸುವ ಮೂಲಕ ಅಗ್ರ-25ರಲ್ಲಿ ಸ್ಥಾನ ಪಡೆದಿದ್ದ ಮಿರ್ಝಾ ಫೈನಲ್ ಗೆ ಅರ್ಹತೆ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದರು.

ಮಿರ್ಝಾ ಎರಡು ದಶಕಗಳಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕುದುರೆ ಸವಾರನಾಗಿದ್ದಾರೆ.

ಇಮ್ತಿಯಾಝ್ ಅನೀಸ್ (ಸಿಡ್ನಿ, 2000) ಹಾಗೂ  ವಿಂಗ್ ಕಮಾಂಡರ್ ಐ.ಜೆ. ಲಾಂಬಾ (ಅಟ್ಲಾಂಟಾ, 1996) ಈಕ್ವೆಸ್ಟ್ರಿಯನ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಇತರ ಇಬ್ಬರು ಒಲಿಂಪಿಯನ್ ಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News