ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್ ಪ್ರೀತ್ ಕೌರ್ ಗೆ ಫೈನಲ್ ನಲ್ಲಿ 6ನೇ ಸ್ಥಾನ

Update: 2021-08-02 13:41 GMT
photo: twitter

ಟೋಕಿಯೊ: ಒಲಿಂಪಿಕ್ಸ್ ಅರ್ಹತಾ ಸುತ್ತಿನ 'ಬಿ' ಗುಂಪಿನಲ್ಲಿ ಎರಡನೇ ಸ್ಥಾನದೊಂದಿಗೆ ಫೈನಲ್ ಗೆ ತಲುಪಿದ್ದ ಭಾರತದ ಡಿಸ್ಕಸ್ ಎಸೆತಗಾರ್ತಿ ಕಮಲ್ ಪ್ರೀತ್ ಕೌರ್ ಸೋಮವಾರ ನಡೆದ  ಮಹಿಳೆಯರ ಡಿಸ್ಕಸ್ ಥ್ರೋ ಫೈನಲ್ ನಲ್ಲಿ ಆರನೇ ಸ್ಥಾನ ಪಡೆದರು.

ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಕೌರ್ ಅವರ ಶ್ರೇಷ್ಠ ಪ್ರದರ್ಶನ ಇದಾಗಿದೆ. ಕೌರ್ ಏಶ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇನ್ನಷ್ಟೇ ಆಡಬೇಕಾಗಿರುವ ಕಾರಣ ಒಲಿಂಪಿಕ್ಸ್ ಅವರ ಮೊದಲ ಪ್ರಮುಖ ಸ್ಪರ್ಧೆಯಾಗಿತ್ತು. ಕೌರ್ ಫೈನಲ್ ಕಣದಲ್ಲಿದ್ದ  ಏಶ್ಯದ ಎರಡನೇ ಸ್ಪರ್ಧಿಯಾಗಿದ್ದರು. ಇನ್ನೊಬ್ಬರು ಚೀನಾದ ಚೆನ್ ಯಾಂಗ್ ಫೈನಲ್ ನಲ್ಲಿದ್ದರು.

ಫೈನಲ್ ನಲ್ಲಿ 63.70ಮೀ. ದೂರಕ್ಕೆ ಡಿಸ್ಕಸ್ ಎಸೆದಿರುವುದು ಕೌರ್ ಅವರ ಶ್ರೇಷ್ಠ ಸಾಧನೆಯಾಗಿತ್ತು. ಮೊದಲ ಪ್ರಯತ್ನದಲ್ಲಿ 61.62, ಮೀ. ಎರಡನೇ ಹಾಗೂ 4ನೇ  ಪ್ರಯತ್ನ ಫೌಲ್ ಆಗಿತ್ತು. ಮೂರನೇ ಪ್ರಯತ್ನದಲ್ಲಿ 63.70 ಮೀ. ಹಾಗೂ 5ನೇ ಪ್ರಯತ್ನದಲ್ಲಿ 61.37 ಮೀ. ದೂರಕ್ಕೆ ಡಿಸ್ಕಸ್ ಎಸೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News