400 ಮೀಟರ್ ಹರ್ಡಲ್ ರೇಸ್: ತನ್ನದೇ ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದ ನಾರ್ವೆಯ ಕಾರ್ಸ್ಟನ್ ವಾರ್ಹೋಮ್

Update: 2021-08-03 07:28 GMT
 ಕಾರ್ಸ್ಟನ್ ವಾರ್ಹೋಮ್ (Photo : Twitter/@SuperSportTV)

ಟೋಕಿಯೊ: ಪುರುಷರ 400 ಮೀಟರ್ ಹರ್ಡಲ್ಸ್‌ನಲ್ಲಿ ಮಂಗಳವಾರ ಒಂದಲ್ಲ ಎರಡು ಹಳೆಯ ದಾಖಲೆಗಳು  ಮುರಿಯಲ್ಪಟ್ಟವು,  ಇದು ಸಾರ್ವಕಾಲಿಕ ಶ್ರೇಷ್ಠ ಒಲಿಂಪಿಕ್ ರೇಸ್‌ಗಳಲ್ಲಿ ಒಂದೆನಿಸಿಕೊಂಡಿತು.

ನಾರ್ವೆಯ ಕಾರ್ಸ್ಟನ್ ವಾರ್‌ಹೋಮ್ ಒಲಿಂಪಿಕ್ಸ್ ನಲ್ಲಿ  400 ಮೀ. ಹರ್ಡಲ್ಸ್‌ನಲ್ಲಿ 45.94 ಸೆಕೆಂಡುಗಳಲ್ಲಿ ಗುರಿ ತ ಲುಪಿ ತನ್ನದೇ ವಿಶ್ವ ದಾಖಲೆಯನ್ನು ಅಳಿಸಿಹಾಕಿದರು. ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.

ಎರಡನೇ ಸ್ಥಾನದಲ್ಲಿರುವ ಅಮೆರಿಕದ ರಾಯ್ ಬೆಂಜಮಿನ್ 46.17 ಸೆಕೆಂಡ್ ನಲ್ಲಿ ರೇಸ್  ಮುಗಿಸಿದರು. ಕಳೆದ ತಿಂಗಳಷ್ಟೇ ವಾರ್ ಹೋಮ್ ನಿರ್ಮಿಸಿದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News