ಒಲಿಂಪಿಕ್ಸ್:ಕಂಚಿಗಾಗಿ ಜರ್ಮನಿ ವಿರುದ್ಧ ಸೆಣಸಲಿರುವ ಭಾರತದ ಪುರುಷರ ಹಾಕಿ ತಂಡ

Update: 2021-08-03 12:36 GMT
photo : twitter/@ddsportschannel

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್  ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-5 ಗೋಲುಗಳ ಅಂತರದಿಂದ ಸೋತಿರುವ ಭಾರತದ ಚಿನ್ನದ ಪದಕ ಬಾಚಿಕೊಳ್ಳುವ ಕನಸು ಭಗ್ನವಾಗಿದೆ.

ಭಾರತಕ್ಕೆ 41 ವರ್ಷಗಳ ಬಳಿಕ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿದರೂ ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶ ಪಡೆದುಕೊಂಡಿದೆ.

ಗುರುವಾರ ಕಂಚಿನ ಪದಕಕ್ಕಾಗಿ ನಡೆಯುವ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಜರ್ಮನಿ ತಂಡದ  ಸವಾಲು ಎದುರಿಸಲಿದೆ. ಜರ್ಮನಿಯು ಮತ್ತೊಂದು ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯದ ವಿರುದ್ಧ 1-3 ಗೋಲುಗಳ ಅಂತರದಿಂದ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News