ಒಲಿಂಪಿಕ್ಸ್: ಸೆಮಿ ಫೈನಲ್ ನಲ್ಲಿ ಅರ್ಜೆಂಟೀನಕ್ಕೆ ಸೋತ ಭಾರತ ಮಹಿಳಾ ಹಾಕಿ ತಂಡ

Update: 2021-08-04 11:51 GMT

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡವು ಅರ್ಜೆಂಟೀನ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲನುಭವಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಗುರ್ಜಿತ್ ಕೌರ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ 2ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆಯನ್ನು ಒದಗಿಸಿಕೊಟ್ಟರು. ಎರಡನೇ ಕ್ವಾರ್ಟರ್ ನಲ್ಲಿ ತಿರುಗೇಟು ನೀಡಿದ ಅರ್ಜೆಂಟೀನದ ನಾಯಕಿ ನೋಯೆಲ್ ಬ್ಯಾರಿಯೊನೊವೊ ಸ್ಕೋರನ್ನು ಸಮಬಲಗೊಳಿಸಿದರು. ಅರ್ಜೆಂಟೀನದ ನಾಯಕಿ ಮತ್ತೊಂದು ಗೋಲನ್ನು ಗಳಿಸಿ ತಂಡವು 2-1 ರಿಂದ ಮುನ್ನಡೆ ಪಡೆಯುವಲ್ಲಿ ನೆರವಾದರು.

ಆಗಸ್ಟ್ 6 ರಂದು ನಡೆಯಲಿರುವ ಪ್ಲೇ ಆಫ್ ಪಂದ್ಯದಲ್ಲಿ ಭಾರತವು ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ವಿರುದ್ಧ ಹೋರಾಟ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News