×
Ad

ಧೋನಿ ಖಾತೆಯಿಂದ ಬ್ಲೂ ಟಿಕ್ ತೆಗೆದು ಮರುಸ್ಥಾಪಿಸಿದ ಟ್ವಿಟರ್

Update: 2021-08-06 17:39 IST

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಖಾತೆಯ ವೆರಿಫೈಯ್ಡ್ ಬ್ಯಾಡ್ಜ್ ಅಥವಾ ಬ್ಲೂ ಟಿಕ್ ಅನ್ನು ಸ್ವಲ್ಪ ಹೊತ್ತು ತೆಗೆದಿರುವ  ಟ್ವಿಟರ್ ಸಂಸ್ಥೆ ಬಳಿಕ ಅದನ್ನು ಮರು ಸ್ಥಾಪಿಸಿದೆ.

ಈ ವರ್ಷ ಜನವರಿ 8 ರಂದು ಧೋನಿ ಕೊನೆಯ ಬಾರಿ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಟ್ವಿಟರ್ ಕಂಪನಿಯು ಬ್ಲೂ ಟಿಕ್ ತೆಗೆದುಹಾಕಿದೆ ಎನ್ನಲಾಗಿದೆ.

ಜೂನ್ ನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಆರೆಸ್ಟೆಸ್ ನ ಮೋಹನ್ ಭಾಗವತ್ ಅವರ ಖಾತೆಗಳಿಂದ ಬ್ಲೂ ಟಿಕ್ ತೆಗೆದುಹಾಕಲಾಗಿತ್ತು.

ಟ್ವಿಟರ್ ನಿಯಮಗಳ ಪ್ರಕಾರ, 6 ತಿಂಗಳ ಕಾಲ ಯಾವುದೇ ಖಾತೆ ನಿಷ್ಕ್ರೀಯವಾಗಿದ್ದರೆ ಆ ಖಾತೆಯಿಂದ ‘ನೀಲಿ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News