×
Ad

ಭಾರತ ಮಹಿಳಾ ಹಾಕಿ ತಂಡದ ಪ್ರಧಾನ ಕೋಚ್ ಸ್ಜಾರ್ಡ್ ಮರಿಜ್ನೆ ರಾಜೀನಾಮೆ

Update: 2021-08-06 19:27 IST
photo: twitter

ಹೊಸದಿಲ್ಲಿ: ಬ್ರಿಟಿನ್ ವಿರುದ್ದ ಒಲಿಂಪಿಕ್ಸ್  ಕಂಚಿನ ಪದಕದ ಪಂದ್ಯದಲ್ಲಿ ಭಾರತ ತಂಡವು ವೀರೋಚಿತ ಸೋಲಿನ ನಂತರ ಪ್ರಧಾನ ಕೋಚ್ ಸ್ಜಾರ್ಡ್ ಮರಿಜ್ನೆ ರಾಜೀನಾಮೆ ನೀಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧದ ಕಂಚಿನ ಪದಕ ಪಂದ್ಯವು ಕೋಚ್ ಆಗಿ ತನ್ನ ಕೊನೆಯ ಪಂದ್ಯ ಆಗಿದೆ ಎಂದು ಮರಿಜ್ನೆ ಬಹಿರಂಗಪಡಿಸಿದರು.

"ನಾನು ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ. ಏಕೆಂದರೆ ಇದು ಭಾರತೀಯ ಮಹಿಳೆಯರೊಂದಿಗೆ ನನ್ನ ಕೊನೆಯ ಪಂದ್ಯವಾಗಿತ್ತು”ಎಂದು ಡಚ್‌ಮನ್ ಭಾರತೀಯ ಮಾಧ್ಯಮಕ್ಕೆ ತಿಳಿಸಿದರು.

ಪಂದ್ಯ ಸೋತಿರುವುದಕ್ಕೆ ಬೇಸರವಾಗಿರುವುದು ನಿಜ. ನಾವು ಗೆಲ್ಲಲು ಬಯಸಿದ್ದೆವು. ನನಗೆ ಹುಡುಗಿಯರ ಬಗ್ಗೆ  ಹೆಮ್ಮೆಯಾಗುತ್ತಿದೆ. ಕಣ್ಣೀರನ್ನು ಹಿಡಿದಿಟ್ಟುಕೊಳ್ಳಿ ಎಂದು ಹೇಳಲಾರೆ. ಅದಕ್ಕೆ ನಮ್ಮ ಮಾತು ಅದಕ್ಕೆ ನೆರವಾಗದು. ನಾವು ಪದಕವನ್ನು ಗೆದ್ದಿಲ್ಲ. ಆದರೆ ನಾವು ದೊಡ್ಡದ್ದನ್ನು ಸಾಧಿಸಿದ್ದೇವೆ. ಇದು ದೇಶಕ್ಕೆ ಸ್ಫೂರ್ತಿಯಾಗಿದೆ. ದೇಶಕ್ಕೆ ಹೆಮ್ಮೆ ತಂದಿರುವ ತೃಪ್ತಿ ಇದೆ . ಕ್ರೀಡಾಕೂಟದುದ್ದಕ್ಕೂ ಸ್ಪೂರ್ತಿಯುತ ಪ್ರದರ್ಶನ ನೀಡಿರುವ ಆಟಗಾರ್ತಿಯರು ಶ್ಲಾಘನೆಗೆ ಅರ್ಹರು ಎಂದು ಮರಿಜ್ನೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News