×
Ad

ಪಾಕಿಸ್ತಾನದ ಸುಪ್ರೀಂಕೋರ್ಟ್ ಗೆ ಮಹಿಳಾ ನ್ಯಾಯಾಧೀಶೆ ನೇಮಕ ಸಾಧ್ಯತೆ

Update: 2021-08-13 20:13 IST
photo: twitter.com/payf_eng

ಇಸ್ಲಮಾಬಾದ್, ಆ.13: ಪಾಕಿಸ್ತಾನದ ಸುಪ್ರೀಂಕೋರ್ಟ್ಗೆ ಇದೇ ಪ್ರಥಮ ಬಾರಿಗೆ ಮಹಿಳಾ ನ್ಯಾಯಾಧೀಶರೊಬ್ಬರು ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಸ್ಥಳೀಯ ಸುದ್ಧಿಮಾಧ್ಯಮ ವರದಿ ಮಾಡಿದೆ. ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯಾಧೀಶ ಮುಶೀರ್ ಆಲಂ ಆಗಸ್ಟ್ 17ರಂದು ನಿವೃತ್ತರಾಗಲಿದ್ದು, ಸೇವಾಜ್ಯೇಷ್ಠತೆಯಲ್ಲಿ 4ನೇ ಹಿರಿಯ ನ್ಯಾಯಾಧೀಶೆಯಾಗಿರುವ, ಲಾಹೋರ್ ಹೈಕೋರ್ಟ್ ನಲ್ಲಿ ಈಗಿರುವ ಇಬ್ಬರು ಮಹಿಳಾ ನ್ಯಾಯಾಧೀಶರಲ್ಲಿ ಒಬ್ಬರಾಗಿರುವ ಅಯಿಷಾ ಎ ಮಲಿಕ್ ಈ ಸ್ಥಾನಕ್ಕೆ ನಿಯುಕ್ತಿಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶ ಗುಲ್ಜಾರ್ ಅಹ್ಮದ್ ಸುಪ್ರೀಂಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಆಯಿಷಾ ಹೆಸರನ್ನು ನಾಮನಿರ್ದೇಶನ ಮಾಡಿದ್ದು, ಈ ವಿಷಯದ ಬಗ್ಗೆ ನಿರ್ಧರಿಸಲು ಸೆಪ್ಟಂಬರ್ 9ರಂದು ಪಾಕಿಸ್ತಾನ ನ್ಯಾಯಾಂಗ ಆಯೋಗದ ಸಭೆ ಕರೆದಿದ್ದಾರೆ. 

ನೇಮಕಗೊಂಡರೆ ಆಯೇಷಾ ಸೇವಾವಧಿ 2031ರ ಮಾರ್ಚ್ ವರೆಗೆ ಇರಲಿದೆ. ಆದರೆ ಈ ನೇಮಕಕ್ಕೆ ಹಲವು ಬಾರ್ ಕೌನ್ಸಿಲ್ ಗಳಿಂದ ವಿರೋಧ ಬರಬಹುದು. ಸೇವಾಜ್ಯೇಷ್ಠತೆಯ ಕುರಿತು ಪ್ರಶ್ನೆಯೂ ಬರಬಹುದು ಎಂದು ಹಿರಿಯ ನ್ಯಾಯವಾದಿಯೊಬ್ಬರು ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News