ಅಮೆರಿಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕಾಂಗ್ರೆಶನಲ್ ಚಿನ್ನದ ಪದಕಕ್ಕಾಗಿ ಮಹಾತ್ಮ ಗಾಂಧಿ ಹೆಸರು ಮರುಪ್ರಸ್ತಾಪ

Update: 2021-08-14 07:24 GMT

ವಾಷಿಂಗ್ಟನ್: ಅಮೆರಿಕಾದ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಗೌರವವಾದ ಕಾಂಗ್ರೆಶನಲ್ ಚಿನ್ನದ ಪದಕವನ್ನು ಶಾಂತಿ ಮತ್ತು ಅಹಿಂಸೆಯ ಪ್ರತಿಪಾದಕ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಮರಣೋತ್ತರವಾಗಿ ನೀಡಿ ಗೌರವಿಸಬೇಕೆಂಬ ನಿರ್ಣಯವನ್ನು ನ್ಯೂಯಾರ್ಕ್‍ನ ಪ್ರಭಾವಿ ಸಂಸದೆ ಕ್ಯಾರೊಲಿನ್ ಬಿ ಮಲೋನಿ ಅಮೆರಿಕಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಮರುಮಂಡಿಸಿದ್ದಾರೆ.

ಮಹಾತ್ಮ ಗಾಂಧಿಯವರ ಐತಿಹಾಸಿಕ ಅಹಿಂಸಾತ್ಮಕ ಸತ್ಯಾಗ್ರಹ ಚಳುವಳಿಯು ಒಂದು ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸ್ಫೂರ್ತಿ ನೀಡಿದೆ. ಅವರ ಉದಾಹರಣೆ ನಮ್ಮನ್ನು ಇತರರ ಸೇವೆಗೆ ಮುಡಿಪಾಗಿಸಲು ಪ್ರೇರೇಪಿಸುತ್ತದೆ, ಎಂದು ನಿರ್ಣಯ ಮರುಮಂಡನೆ ವೇಳೆ ಮಲೋನಿ ಹೇಳಿದರು.

ಓರ್ವ ಜನಸೇವಕಿಯಾಗಿ ಮಹಾತ್ಮ ಗಾಂಧಿ ತಮಗೆ ಸದಾ ಸ್ಫೂರ್ತಿದಾಯಕವಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ. ಈ ನಿರ್ಣಯಕ್ಕೆ ಅಂಗೀಕಾರ ದೊರಕಿದ್ದೇ ಆದಲ್ಲಿ ಕಾಂಗ್ರೆಶನಲ್ ಚಿನ್ನದ ಪದಕ ಪಡೆಯುವ ಮೊದಲ ಭಾರತೀಯರಾಗಲಿದ್ದಾರೆ ಮಹಾತ್ಮ ಗಾಂಧಿ. ಈ ಹಿಂದೆ ಈ ಪ್ರಶಸ್ತಿ ಜಾರ್ಜ್ ವಾಷಿಂಗ್ಟನ್, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೇಸಾ ಮತ್ತು ರೋಸಾ ಪಾಕ್ರ್ಸ್ ಅವರಿಗೆ ಸಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News