ಅಮೆರಿಕ ವಿಮಾನದ ಚಕ್ರ ಹಿಡಿದುಕೊಂಡು ಪಲಾಯನ ಮಾಡುವ ಯತ್ನದಲ್ಲಿದ್ದ ಅಫ್ಘಾನ್ ಪ್ರಜೆಗಳು ಮೇಲಿನಿಂದ ಬಿದ್ದು ಮೃತ್ಯು

Update: 2021-08-16 13:50 GMT
photo : screengrab [twitter]

ಕಾಬೂಲ್ : ತಾಲಿಬಾನ್ ಆಳ್ವಿಕೆಯಿಂದ ತಪ್ಪಿಸಿಕೊಳ್ಳಲು ಅಫ್ಘಾನ್ ಪ್ರಜೆಗಳ ಹುಚ್ಚು ಪ್ರಯತ್ನಗಳನ್ನು ತೋರಿಸುವ ವೀಡಿಯೊ ಒಂದರಲ್ಲಿ  ಕಾಬೂಲ್‌ನಿಂದ ನಿರ್ಗಮಿಸಿದ್ದ ಅಮೆರಿಕ ವಿಮಾನದ ಚಕ್ರವನ್ನು ಹಿಡಿದಿದ್ದ ಮೂವರು ವ್ಯಕ್ತಿಗಳು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಹಲವರು ಹಂಚಿಕೊಂಡಿರುವ ವೀಡಿಯೊದಲ್ಲಿ ವಿಮಾನದಿಂದ ಚುಕ್ಕಿಯೊಂದು ಕೆಳಗೆ ಬಿದ್ದಂತೆ ಗೋಚರಿಸುತ್ತಿದೆ.

"ಅಮೆರಿಕದ ವಿಮಾನದ ಟೈರ್ ಅಥವಾ ರೆಕ್ಕೆಯ ಪಕ್ಕದಲ್ಲಿ ಅಡಗಿಕೊಂಡು ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದ ಮೂವರು ಕಾಬೂಲ್ ನಿವಾಸಿಗಳು, ಸ್ಥಳೀಯ ಜನರ ಮನೆಯ ಮೇಲ್ಛಾವಣಿಯ ಮೇಲೆ ಬಿದ್ದಿದ್ದಾರೆ. ಕಾಬೂಲ್‌ನಲ್ಲಿನ ಭಯಾನಕ ಪರಿಸ್ಥಿತಿಗಳಿಂದಾಗಿ ಅವರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ ಎಂದು ವೀಡಿಯೊವನ್ನು ಟ್ವಿಟರ್ ನಲ್ಲಿ  ಹಂಚಿಕೊಂಡಿರುವ ಟೋಲೊ ನ್ಯೂಸ್ ನ ತಾರಿಕ್ ಮಜಿದಿ ಬರೆದುಕೊಂಡಿದ್ದಾರೆ.

ಅಮೆರಿಕದ ವಾಯುಸೇನೆಗೆ ಸೇರಿದ ವಿಮಾನವು ಕಾಬೂಲ್ ವಿಮಾನ ನಿಲ್ದಾಣದಲ್ಲಿ  ಟೇಕ್ ಆಫ್ ಆಗುತ್ತಿರುವಾಗ ರನ್ ವೇಯಲ್ಲಿ ಜಮಾಯಿಸಿದ್ದ ಜನರ ಗುಂಪು ವಿಮಾನವನ್ನು ಚೇಸಿಂಗ್ ಮಾಡುತ್ತಿದ್ದ ಭಯಾನಕ ದೃಶ್ಯಗಳು ಸೆರೆಯಾಗಿದೆ.

ವಾರಾಂತ್ಯದಲ್ಲಿ ತಾಲಿಬಾನ್‌ಗಳು ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಉಂಟಾದ ಅಶಾಂತಿಯಿಂದಾಗಿ  ನಗರದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಸಾವಿರಾರು ಜನರ ಹತಾಶೆ ಹಾಗೂ  ಸಂಕಷ್ಟವನ್ನು ವೀಡಿಯೊಗಳು ತೋರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News