ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌: ಭಾರತದ 4x400 ಮೀ. ಮಿಶ್ರ ರಿಲೇ ತಂಡಕ್ಕೆ ಕಂಚು

Update: 2021-08-18 15:27 GMT

ನೈರೋಬಿ(ಕೀನ್ಯ): ಭಾರತ್ ಶ್ರೀಧರ್, ಪ್ರಿಯಾ ಹಬ್ಬತನಹಳ್ಳಿ ಮೋಹನ್, ಸಮ್ಮಿ, ಕಪಿಲ್ ಒಳಗೊಂಡ ಭಾರತದ 4x400 ಮೀ. ಮಿಶ್ರ ರಿಲೇ ತಂಡವು ಬುಧವಾರ ನೈರೋಬಿಯಲ್ಲಿ ನಡೆದ ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್‌ಶಿಪ್‌ ನಲ್ಲಿ ಕಂಚು ಗೆದ್ದುಕೊಂಡಿತು.

ಈ ಮೂಲಕ ಭಾರತವು ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ 5ನೇ ಪದಕ ಜಯಿಸಿ ಗಮನ ಸೆಳೆಯಿತು.

ಭಾರತ ತಂಡವು 3: 20.60 ಸೆಕೆಂಡುಗಳಲ್ಲಿ ಕ್ರಮಿಸಿ ಫೈನಲ್‌ನಲ್ಲಿ ಮೂರನೇ ಸ್ಥಾನ ಗಳಿಸಿತು. ನೈಜೀರಿಯಾ ಹಾಗೂ  ಪೋಲ್ಯಾಂಡ್ ಕ್ರಮವಾಗಿ 3: 19.70 ಸೆ. ಹಾಗೂ  3: 19.80 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಹಾಗೂ  ಬೆಳ್ಳಿ ಪದಕಗಳನ್ನು ಗೆದ್ದವು.

4x400 ಮೀ. ಮಿಶ್ರ  ರಿಲೇಯಲ್ಲಿ ಬುಧವಾರದ ಕಂಚಿನ ಪದಕ ಗೆಲ್ಲುವ ಮೊದಲು ಭಾರತವು  ವಿಶ್ವ ಅಂಡರ್ -20 ಕ್ರೀಡಾಕೂಟದಲ್ಲಿ  ಸೀಮಾ ಆಂಟಿಲ್ (ಡಿಸ್ಕಸ್ ಥ್ರೋ,2002ರಲ್ಲಿ ಕಂಚು) , ನವಜೀತ್ ಕೌರ್ ಧಿಲ್ಲೋನ್ (ಡಿಸ್ಕಸ್ ಥ್ರೋನಲ್ಲಿ ಕಂಚು, 2014), ಒಲಿಂಪಿಕ್ಸ್  ಚಾಂಪಿಯನ್ ನೀರಜ್ ಚೋಪ್ರಾ (ಜಾವೆಲಿನ್ ಥ್ರೋನಲ್ಲಿ ಚಿನ್ನ, 2016) ಹಾಗೂ  ಹಿಮಾ ದಾಸ್ (400 ಮೀ, 2018 ರಲ್ಲಿ ಚಿನ್ನ) ಮೂಲಕ ಪದಕಗಳನ್ನು ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News