ಮೂರನೇ ಟೆಸ್ಟ್: ಭಾರತ ವಿರುದ್ಧ ಇಂಗ್ಲೆಂಡ್ 432 ರನ್ ಗೆ ಆಲೌಟ್, ಭರ್ಜರಿ ಮುನ್ನಡೆ

Update: 2021-08-27 10:35 GMT

ಲೀಡ್ಸ್: ನಾಯಕ ಜೋ ರೂಟ್(121)ಶತಕ, ಡೇವಿಡ್ ಮಲಾನ್(70), ಹಸೀಬ್ ಹಮೀದ್(68) ಹಾಗೂ ರೋರಿಬರ್ನ್ಸ್(61)ಅರ್ಧಶತಕದ ಕೊಡುಗೆ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧ ಮೂರನೇ ಟೆಸ್ಟ್ ನ ಮೊದಲ ಇನಿಂಗ್ಸ್ ಮೂರನೇ ದಿನದಾಟವಾದ ಶುಕ್ರವಾರ  432 ರನ್ ಗೆ ಆಲೌಟಾಗಿದೆ. ಮೊದಲ ಇನಿಂಗ್ಸ್ ನಲ್ಲಿ 354 ರನ್ ಭರ್ಜರಿ ಮುನ್ನಡೆ ಪಡೆದಿದೆ.

ಭಾರತವು ಮೂರನೇ ಟೆಸ್ಟ್ ನ ಮೊದಲ ದಿನದಾಟದಲ್ಲೇ ಕೇವಲ 78 ರನ್ ಗೆ ಆಲೌಟಾಗಿದೆ.

ಭಾರತದ ಪರ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಶಮಿ(4-95) ಯಶಸ್ವಿ ಬೌಲರ್ ಎನಿಸಿಕೊಂಡರು. ಬುಮ್ರಾ(2-59), ಮುಹಮ್ಮದ್ ಸಿರಾಜ್(2-86) ಹಾಗೂ ರವೀಂದ್ರ ಜಡೇಜ(88-2) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News