×
Ad

ಪ್ಯಾರಾಲಿಂಪಿಕ್ಸ್‌: ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭವಿನಾಬೆನ್

Update: 2021-08-29 09:14 IST
Photo credit: PTI

ಟೋಕಿಯೊ, ಆ.29: ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ಗೆದ್ದುಕೊಡುವ ಮೂಲಕ ಭವಿನಾಬೆನ್ ಪಟೇಲ್ ರವಿವಾರ ಇತಿಹಾಸ ಸೃಷ್ಟಿಸಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚೀನಾದ ಝೊವು ಯಿಂಗ್ ವಿರುದ್ಧ ಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಭವಿನಾಬೆನ್ ಮಹಿಳಾ ಸಿಂಗಲ್ಸ್‌ನ ಕ್ಲಾಸ್ 4 ಸ್ಪರ್ಧೆಯಲ್ಲಿ ಬೆಳ್ಳಿಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮೊದಲ ಗೇಮ್‌ನಲ್ಲಿ 11-7 ಅಧಿಕಾರಯುತ ಗೆಲುವಿನೊಂದಿಗೆ ಮುನ್ನಡೆ ಪಡೆದ ವಿಶ್ವದ ನಂಬರ್ ವನ್ ಆಟಗಾರ್ತಿ ಝೊವು ಯಿಂಗ್, ಭಾರತೀಯ ಟಿಟಿ ಪಟುವಿಗೆ ಹಿಂಗೈ ಹೊಡೆತಗಳ ಮೂಲಕ ನಿರಂತರವಾಗಿ ತೊಂದರೆ ನೀಡಿದರು. ಮುಂದಿನ ಗೇಮ್‌ನಲ್ಲೂ ಅಬಾಧಿತ ಮುನ್ನಡೆ ಗಳಿಸಿದ ಯಿಂಗ್ 11-5ರಿಂದ ಗೆಲುವು ಸಾಧಿಸಿದರು. ಮೊದಲ ಎರಡು ಗೇಮ್‌ಗಳಿಗಿಂತ ತೀವ್ರ ಸೆಣೆಸಾಟ ಮೂರನೇ ಗೇಮ್‌ನಲ್ಲಿ ಕಂಡುಬಂದರೂ ಅಂತಿಮವಾಗಿ 11-6 ಅಂಕಗಳ ಗೆಲುವಿನೊಂದಿಗೆ ಚೀನಿ ಆಟಗಾರ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಇದಕ್ಕೂ ಮುನ್ನ ವಿಶ್ವದ 3ನೇ ಕ್ರಮಾಂಕದ ಆಟಗಾರ್ತಿ ಚೀನಾದ ಮಿಯೊ ಝಂಗ್ ವಿರುದ್ಧ 7-11, 11-7, 11-4, 9-11, 11-8 ಅಂತರದ ಗೆಲುವಿನೊಂದಿಗೆ ಭಾರತೀಯ ಪಟು ಫೈನಲ್ ಪ್ರವೇಶಿಸಿ ಐತಿಹಾಸಿಕ ಪದಕ ಖಾತರಿಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News