ಪ್ಯಾರಾಲಿಂಪಿಕ್ಸ್: ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಅವನಿ ಲೆಖಾರಾ

Update: 2021-08-30 03:45 GMT
ಫೋಟೊ : ಅವನಿ ಲೆಖಾರಾ (Twitter) 

ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನ 10 ಮೀಟರ್ ಏರ್ ರೈಫಲ್ ಸ್ಡ್ಯಾಂಡಿಂಗ್ (ಎಸ್‍ಎಚ್1) ಸ್ಪರ್ಧೆಯಲ್ಲಿ ಭಾರತದ ಅವನಿ ಲೆಖಾರಾ ಸೋಮವಾರ ಚಿನ್ನದ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಪ್ಯಾರಾಲಿಂಪಿಕ್ಸ್ ನಲ್ಲಿ ದಾಖಲೆ ಎನಿಸಿದ 249.6 ಅಂಕಗಳೊಂದಿಗೆ ಭಾರತದ ಶೂಟರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 249.6 ಅಂಕಗಳ ಮೂಲಕ ಅವನಿ ವಿಶ್ವದಾಖಲೆ ಸರಿಗಟ್ಟಿದರು.

ಚೀನಾದ ಕ್ಯೂಪಿಂಗ್ ಝಾಂಗ್ (248.9) ಮತ್ತು ಉಕ್ರೇನ್‍ನ ಇರಿನಾ ಶೆಹತಿಕ್ (227.5) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.

ಅವನಿ ತಮ್ಮ ಮೂರು ಹಾಗೂ ನಾಲ್ಕನೇ ಪ್ರಯತ್ನದಲ್ಲಿ ಕ್ರಮವಾಗಿ 104.9 ಮತ್ತು 104.8 ಅಂಕಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರು. ಅರ್ಹತಾ ಸುತ್ತಿನ ಕೊನೆಯ ಸುತ್ತಿನಲ್ಲಿ 104.1 ಅಂಕ ಪಡೆದರು.

ಅವನಿ ಚಿನ್ನದ ಸಾಧನೆಯೊಂದಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಸೇರಿ ಏಳು ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 48ನೇ ಸ್ಥಾನಕ್ಕೇರಿದೆ. ಅಮೆರಿಕ 39 ಚಿನ್ನ 41 ಬೆಳ್ಳಿ ಮತ್ತು 33 ಕಂಚಿನ ಪದಕ ಸೇರಿ 113 ಪದಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, 33 ಚಿನ್ನ, 32 ಬೆಳ್ಳಿ ಮತ್ತು 18 ಚಿನ್ನ ಸಹಿತ 88 ಪದಕಗಳನ್ನು ಗೆದ್ದ ಚೀನಾ 2ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News