×
Ad

ಪ್ಯಾರಾಲಿಂಪಿಕ್ಸ್: ಪುರುಷರ ಎಫ್ 52 ಡಿಸ್ಕಸ್ ಎಸೆತದಲ್ಲಿ ಕಂಚನ್ನು ಕಳೆದುಕೊಂಡ ವಿನೋದ್ ಕುಮಾರ್

Update: 2021-08-30 15:42 IST
photo: twitter

ಹೊಸದಿಲ್ಲಿ: ಭಾರತದ  ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್ ಸೋಮವಾರ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ತನ್ನ ಎಫ್ 52 ವಿಭಾಗದ ಕಂಚಿನ ಪದಕವನ್ನು ಕಳೆದುಕೊಂಡರು. ಸ್ಪರ್ಧೆಯ ಸಮಿತಿಯು ನಡೆಸಿದ ಮೌಲ್ಯಮಾಪನದಲ್ಲಿಎಫ್ 52 ಗುಂಪಿನಲ್ಲಿ ಸ್ಪರ್ಧಿಸಲು ವಿನೋದ್ ಕುಮಾರ್ ಅನರ್ಹರು ಎಂದು ತೀರ್ಮಾನಿಸಲಾಗಿದೆ.

1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿಗಾಯಗೊಂಡಿದ್ದ ಸೈನಿಕನ ಪುತ್ರನಾಗಿರುವ  41 ವರ್ಷದ ಬಿಎಸ್ ಎಫ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಕುಮಾರ್ ಎಫ್ 52  ವಿಭಾಗದ ಫೈನಲ್ ನಲ್ಲಿ 19.91 ಮೀ. ದೂರಕ್ಕೆ ಡಿಸ್ಕಸ್ ಎಸೆದು 3ನೇ ಸ್ಥಾನ ಪಡೆದಿದ್ದರು.  ಪೋಲೆಂಡ್‌ನ ಪಿಯೊಟರ್ ಕೊಸೆವಿಚ್ (20.02 ಮೀ) ಹಾಗೂ  ಕ್ರೊಯೇಶಿಯದ ವೆಲಿಮಿರ್ ಸ್ಯಾಂಡರ್ (19.98 ಮೀ) ಮೊದಲನೇ ಹಾಗೂ ಎರಡನೇ ಸ್ಥಾನ ಪಡೆದರು.

ರವಿವಾರ ಕೆಲವು ಸಹ ಸ್ಪರ್ಧಿಗಳು  ವರ್ಗೀಕರಣದ ಬಗ್ಗೆ ಆಕ್ಷೇಪಿಸಿ ಫಲಿತಾಂಶವನ್ನು ಪ್ರಶ್ನಿಸಿದ ಕಾರಣ ವಿನೋದ್ ಕುಮಾರ್ ಅವರ ಕಂಚಿನ ಪದಕದ ಸಂಭ್ರಮಕ್ಕೆ ತಡೆಯೊಡ್ಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News